ವ್ಯಾಕ್ಸಿನ್ ವೇಳೆ ದೇವರಿಗೆ ಸೂಜಿ ಚುಚ್ಚಬಾರದೆಂದು ಮಹಿಳೆ ರಂಪಾಟ |Koppal|

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮದ ಯಂಕಮ್ಮ ಎಂಬ ಮಹಿಳೆಯು ಮೈಮೇಲೆ ದೇವರು ಬಂದಂತೆ ನಟನೆ ಮಾಡಿ ರಂಪಾಟ ಮಾಡಿದ ಘಟನೆ ಡಿಸಿ, ಸಿಇಒ ವ್ಯಾಕ್ಸಿನ್ ಜಾಗೃತಿ ವೇಳೆ ನಡೆದಿದೆ. ದೇವರಿಗೆ ಸೂಜಿ ಚುಚ್ಚಬಾರದು ಎಂದು ಚೀರಾಡಿದರೂ ಬಿಡದೆ ಕೊನೆಗೂ ಮನವೊಲಿಸಿ ಆರೋಗ್ಯ ಸಿಬ್ಬಂದಿ ವ್ಯಾಕ್ಸಿನ್ ಹಾಕಿದ್ದಾರೆ.