ನಾಳೆ ಇಡಿ ಅಧಿಕಾರಿಗಳು ಕೇಳುವ ಪ್ತಶ್ನೆಗಳಿಗೆ ಉತ್ತರಿಸುತ್ತೇವೆ: ಡಿಕೆಶಿ

ನಾಳೆ ಇಡಿ ಅಧಿಕಾರಿಗಳು ಕೇಳುವ ಪ್ತಶ್ನೆಗಳಿಗೆ ಉತ್ತರಿಸುತ್ತೇವೆ: ಡಿಕೆಶಿ

ಮಂಡ್ಯ, ಅ.2-ನ್ಯಾಷನಲ್ ಹೆರಾಲ್ಡ್ ಪ್ರಕರಣ‌ ಕುರಿತಂತೆ ಜಾರಿ ನಿರ್ದೇಶನಾಲಯ ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಖರಡ್ಯ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಚಾರಣೆಗೆ ಹಾಜರಾಗುವ ಕುರಿತು ತಾವು ಹಾಗೂ ತಮ್ಮ ಸಹೋದರ ಡಿ.ಕೆ.ಸುರೇಶ್ ಕಾಲಾವಕಾಶ ಕೇಳಿದ್ದೆವು. ಭಾರತ್ ಜೋಡೊ ಯಾತ್ರೆ ಮುಗಿದ ಮೇಲೆ ಹಾಜರಾಗುವುದಾಗಿ ಕಾಲಾವಕಾಶ ಕೊಡುವಂತೆ ಕೇಳಿದ್ದೆವು.ಆದರೆ ಇಡಿ ಅಧಿಕಾರಿಗಳು ಮತ್ತೊಂದು ನೋಟಿಸ್ ನೀಡಿದ್ದಾರೆ ಎಂದರು.
ನಾಳೆ ಬೆಳಿಗ್ಗೆ 10.30ಕ್ಕೆ ಹಾಜರಾಗುವಂತೆ ಆದೇಶ ಕೊಡುತ್ತಿದ್ದೇವೆ ಎಂದು ಅಧಿಕಾರಿಗಳು ಎರಡನೇ ನೋಟಿಸ್ ನೀಡಿದ್ದಾರೆ. ಈ ಕುರಿತು ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದೇವೆ ನಾವು ನಮ್ಮ ಪಕ್ಷ ಕಾನೂನಿಗೆ ಗೌರವ ಕೊಡುವವರು. ಅಗೌರವ ತೋರುವುದು ಸರಿಯಲ್ಲ. ತಾವು ಮತ್ತು ಡಿ.ಕೆ.ಸುರೇಶ್ ನಾಳೆ ದೆಹಲಿಗೆ ತೆರಳಿ ವಿಚಾರಣೆಗೆ ಹಾಜರಾಗಿ ಇಡಿ ಅಧಿಕಾರಿಗಳು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವುದಾಗಿ ಅವರು ತಿಳಿಸಿದರು.