ನಾನು ರಾಜಕೀಯ ಕ್ಷೇತ್ರಕ್ಕೆ ಬರಲು ಜನಾರ್ಧನ ರೆಡ್ಡಿ ಕಾರಣ, ಅವರೇ ನನ್ನನ್ನು ಕರೆತಂದಿದ್ದು- ಸಚಿವ ಆನಂದ್ ಸಿಂಗ್

ನಾನು ರಾಜಕೀಯ ಕ್ಷೇತ್ರಕ್ಕೆ ಬರಲು ಜನಾರ್ಧನ ರೆಡ್ಡಿ ಕಾರಣ, ಅವರೇ ನನ್ನನ್ನು ಕರೆತಂದಿದ್ದು- ಸಚಿವ ಆನಂದ್ ಸಿಂಗ್

ಕೊಪ್ಪಳ: ಮಾಜಿ ಸಚಿವ ಜನಾರ್ಧನ ರೆಡ್ಡಿ ಹೊಸ ಪಕ್ಷ ಘೋಷಣೆಯ ನಂತ್ರ ಬಿಜೆಪಿಯಲ್ಲಿ ತಳಮಳ ಆರಂಭಗೊಂಡಿದೆ. ಈ ಬೆನ್ನಲ್ಲೇ ಸಚಿವ ಆನಂದ್ ಸಿಂಗ್, ಜನಾರ್ಧನ ರೆಡ್ಡಿಯೇ ನನ್ನನ್ನು ರಾಜಕೀಯಕ್ಕೆ ತರೆತಂದಿದ್ದು ಎನ್ನುವ ಮೂಲಕ ಅಚ್ಚರಿಯನ್ನು ಹುಟ್ಟುಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ಆತ್ಮೀಯ ಸ್ನೇಹಿತರದಲ್ಲಿ ಜನಾರ್ಧನ ರೆಡ್ಡಿಯೂ ಒಬ್ಬರಾಗಿದ್ದಾರೆ. ನಾನು ರಾಜಕೀಯಕ್ಕೆ ಬರೋದಕ್ಕೆ ಕಾರಣವೇ ಅವರಾಗಿದ್ದಾರೆ ಎಂದರು.

ನಾನು 2008ರ ಚುನಾವಣೆಯಲ್ಲಿ ನಿಲ್ಲಬಾರದು ಎಂದು ನಿರ್ಧರಿಸಿದ್ದೆನು. ಆಗ ನನಗೆ ಧೈರ್ಯ ತುಂಬಿ, ಚುನಾವಣೆಗೆ ನಿಲ್ಲುವಂತೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದೇ ಜನಾರ್ಧನರೆಡ್ಡಿ ಅವರು ಎಂದು ನೆನಪು ಮಾಡಿಕೊಂಡರು.