ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಪಯಣಿಸಿದ ಜೂ. ರೆಬಲ್ ಸ್ಟಾರ್

ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಪಯಣಿಸಿದ ಜೂ. ರೆಬಲ್ ಸ್ಟಾರ್

ರೆಬಲ್ ಸ್ಟಾರ್​ ಅಂಬರೀಷ್​ ಪುತ್ರ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅವರು 'ನಮ್ಮ ಮೆಟ್ರೋ'ದಲ್ಲಿ ಮೊದಲ ಬಾರಿಗೆ ಪಯಣಿಸಿದ್ದಾರೆ. ನಟ ಅಭಿಷೇಕ್ ಅವರಿಗೆ ನಿರ್ದೇಶಕ ಎಸ್‌.ಮಹೇಶ್‌ಕುಮಾರ್‌ ಸಾಥ್ ನೀಡಿದ್ದಾರೆ. 'ನಮ್ಮ ಮೆಟ್ರೋ'ದಲ್ಲಿ ಅಭಿಷೇಕ್ ಅವರು ಪಯಣಿಸಿರುವ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸದ್ಯ ಅಭಿಷೇಕ್ ಅವರು ಡಾ. ಸೂರಿ ನಿರ್ದೇಶನದ 'ಬ್ಯಾಡ್​ ಮ್ಯಾನರ್ಸ್' ಚಿತ್ರದಲ್ಲಿ ಬ್ಯುಸಿ ಆಗಿದ್ದು, ನಂತರ 'ಹೆಬ್ಬುಲಿ' ನಿರ್ದೇಶಕ ಕೃಷ್ಣ ಅವರ 'ಕಾಳಿ' ಚಿತ್ರದಲ್ಲಿ ನಟಿಸಲಿದ್ದಾರೆ.