ಸಬ್ಬನಕುಪ್ಪೆ: ವಾಹನ ಡಿಕ್ಕಿ: ಚಿರತೆ ಮರಿ ಸಾವು

ಸಬ್ಬನಕುಪ್ಪೆ: ವಾಹನ ಡಿಕ್ಕಿ: ಚಿರತೆ ಮರಿ ಸಾವು

ಶ್ರೀರಂಗಪಟ್ಟಣ: ವಾಹನವೊಂದು ಡಿಕ್ಕಿಯಾಗಿ ಒಂದು ವರ್ಷ ಪ್ರಾಯದ ಹೆಣ್ಣು ಚಿರತೆ‌ ಮರಿ‌ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಸಬ್ಬನಕುಪ್ಪೆ ಗೇಟ್ ಬಳಿ ಗುರುವಾರ ಸಂಜೆ‌ ನಡೆದಿದೆ.

ಬೆಂಗಳೂರು- ಮೈಸೂರು ದಶಪಥ ರಸ್ತೆ ದಾಟುತ್ತಿದ್ದಾಗ ಅವಘಡ ನಡೆದಿದ್ದು, ತಲೆಗೆ ತೀವ್ರ ಗಾಯವಾಗಿ ಚಿರತೆ ಮರಿ ಸ್ಥಳದಲ್ಲೇ‌ ಮೃತಪಟ್ಟಿದೆ.

ಯಾವ ವಾಹನ ಡಿಕ್ಕಿ ಹೊಡೆದಿದೆ ಎಂಬುದು ತಿಳಿದು ಬಂದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮೇಲಧಿಕಾರಿಗಳ ನಿರ್ದೇಶನದಂತೆ ಕ್ರಮ ವಹಿಸಲಾಗುವುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.