ನಕಲಿ ಬ್ಯೂಟಿ ಪಾರ್ಲರ್‌ಗಳ ಹಾವಳಿ; ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಚರ್ಮ ಸಮಸ್ಯೆ

ನಕಲಿ ಬ್ಯೂಟಿ ಪಾರ್ಲರ್‌ಗಳ ಹಾವಳಿ; ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಚರ್ಮ ಸಮಸ್ಯೆ

ಬೆಂಗಳೂರಿನಲ್ಲಿ ಇತ್ತೀಚೆಗೆ ಕೆಲ ಪಾರ್ಲರ್‌ಗಳಿಗೆ ಹೋಗಿ ಬಂದ ತಕ್ಷಣ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಮುಖದಲ್ಲಿ ಬಿಳಿಗುಳ್ಳೆ, ನವೆ ಸಮಸ್ಯೆ ಸೇರಿದಂತೆ ಕಲೆಗಳ ಸಮಸ್ಯೆ ಹೆಚ್ಚಾಗ್ತಿದೆ. ಈ ಸಮಸ್ಯೆಗಳಿಗೆ ಪ್ರಮುಖ ಕಾರಣ ನಕಲಿ ಪಾರ್ಲರ್ ಹಾವಳಿ ಅಂತಾ ಖುದ್ದು ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಸ್ಫೋಟಕ ವಿಚಾರ ಬಾಯಿ ಬಿಟ್ಟಿದೆ. ಬೆಂಗಳೂರಿನಲ್ಲಿ ಅನಾನುಭವಿ ಬ್ಯೂಟಿಷನ್‍ಗಳು ದುಡ್ಡಿನಾಸೆಗೆ ಪಾರ್ಲರ್ ತೆರೆಯುತ್ತಿರೋದ್ರಿಂದ ಈ ಸಮಸ್ಯೆ ಉದ್ಭವವಾಗಿದೆ.