ಧಾರವಾಡದಲ್ಲಿ 13ನೇ ದಿನಕ್ಕೆ ಕಾಲಿಟ್ಟ ʼನೀರು ಸರಬರಾಜು ನೌಕರರ ಮುಷ್ಕರʼ : ಮೊಬೈಲ್ ಟವರ್ ಏರಿದ ನೌಕರನ ಹೈಡ್ರಾಮಾ

ಧಾರವಾಡ : ಆಲೂರು ವೆಂಕಟರಾವ್ ವೃತ್ತದ ಬಳಿ ಕಳೆದ 13 ದಿನಗಳಿಂದ ನೀರು ಸರಬರಾಜು ನೌಕರರ ಮುಷ್ಕರ ನಡೆಸಿದ್ದು, ಈ ವೇಳೆ ನೌಕರನೊಬ್ಬ ಭಿತ್ತಿ ಪತ್ರ ಹಿಡಿದುಕೊಂಡು ಟವರ್ ಏರಿ ಹೈಡ್ರಾಮ ಸೃಷ್ಟಿಸಿದ್ದಾನೆ.ನೀರು ಸರಬರಾಜು ನೌಕರರ ಮುಷ್ಕರದಲ್ಲಿ ಭಿತ್ತಿ ಫಲಕ ಹಿಡಿದು ಹೈಡ್ರಾಮ ಮಾಡಿದ ವ್ಯಕ್ತಿ ಮಲ್ಲಿಕಾರ್ಜುನ ಗುಮ್ಮಗೋಳ ಎಂದು ಗುರುತಿಸಲಾಗಿದೆ. ಟವರ್ ನ ತುತ್ತ ತುದಿಯಲ್ಲಿ ಕುಳಿತು ಭಿತ್ತಿ ಫಲಕವನ್ನು ಪ್ರದರ್ಶನ ಮಾಡಿದ್ದಾನೆ. ತಮ್ಮ ಬೇಡಿಕೆ ಇಡೇರಿಸುವವರೆಗೂ ಟವರ್ನಿಂದ ಇಳಿಯುವುದಿಲ್ಲ ಎಂದಿದ್ದಾನೆ. ಅಲ್ಲದೆ, ಕಳೆದ ಏಳು ತಿಂಗಳಿನಿಂದ ನಮಗೆ ವೇತನ ನೀಡದೆ ಬಾಕಿ ಉಳಿಸಿದ್ದಾರೆ. ಕೂಡಲೇ ಬಾಕಿ ವೇತನ ನೀಡುವಂತೆ ಆಗ್ರಹಿಸಿದ್ದಾನೆ. ಈ ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.