ಧನಂಜಯ 25ನೇ ಚಿತ್ರ ಘೋಷಣೆ: ವಿಜಯ್ ನಿರ್ದೇಶನದಲ್ಲಿ ಡಾಲಿ ಸಿನಿಮಾ

ಧನಂಜಯ 25ನೇ ಚಿತ್ರ ಘೋಷಣೆ: ವಿಜಯ್ ನಿರ್ದೇಶನದಲ್ಲಿ ಡಾಲಿ ಸಿನಿಮಾ

ಮಕರ ಸಂಕ್ರಾಂತಿ ದಿನದಂದು ಡಾಲಿ ಧನಂಜಯ ಅವರ 25ನೇ ಚಿತ್ರ ಘೋಷಣೆಯಾಗಿದೆ. ಕೆಆರ್ ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ 25ನೇ ಚಿತ್ರ ಬರುತ್ತಿದ್ದು, ಚಿತ್ರಕ್ಕೆ 'ಹೊಯ್ಸಳ' ಎಂದು ಹೆಸರಿಡಲಾಗಿದೆ.

ವಿಜಯ್ ಎನ್. ನಿರ್ದೇಶನದ 'ಹೊಯ್ಸಳ' ಚಿತ್ರದಲ್ಲಿ ಧನಂಜಯ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಕಾರ್ತಿಕ್ ಮತ್ತು ಯೋಗಿ ಬಿ ರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಥಮನ್ ಎಸ್ ಸಂಗೀತವಿದೆ. ಈ ವರ್ಷದ ಕರ್ನಾಟಕ ರಾಜ್ಯೋತ್ಸವಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಧನಂಜಯ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ತಾರಾಗಣದ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.