ದೇವನೂರು ಮಹಾದೇವ ಸೇರಿ 7 ಸಾಹಿತಿಗಳ ಪಠ್ಯ ಶಾಲೆಗಳಲ್ಲಿ ಮುಂದುವರಿಕೆ : ಶಿಕ್ಷಣ ಇಲಾಖೆ ಆದೇಶ

ದೇವನೂರು ಮಹಾದೇವ ಸೇರಿ 7 ಸಾಹಿತಿಗಳ ಪಠ್ಯ ಶಾಲೆಗಳಲ್ಲಿ ಮುಂದುವರಿಕೆ : ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು : ಪಠ್ಯಪುತ್ತಕ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಏಳು ಸಾಹಿತಿಗಳ ಪಠ್ಯ ಕೈಬಿಟ್ಟು ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆ ಇದೀಗ ಈ ಆದೇಶವನ್ನು ಹಿಂಪಡೆದಿದೆ. ಎಂದಿನಂತೆ ಪಠ್ಯವನ್ನು ಮುಂದುವರೆಸಲು ಪರಿಷ್ಕೃತ ಆದೇಶದಲ್ಲಿ ಸೂಚಿಸಲಾಗಿದೆ.

2022-23 ನೇ ಸಾಲಿನ 1 ರಿಂದ 10 ನೇ ತರಗತಿ ಕನ್ನಡ ಭಾಷಾ ಪಠ್ಯವನ್ನು ಸರ್ಕಾರ ಪರಿಷ್ಕರಿಸಿತ್ತು. ಇದು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ದೇವನೂರು ಮಹಾದೇವ ಸೇರಿ 7 ಲೇಖಕರು ತಾವು ಪಠ್ಯಕ್ಕಾಗಿ ನೀಡಿದ್ದ ಗದ್ಯ-ಪದ್ಯವನ್ನು ಕೈ ಬಿಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಆ ಪಠ್ಯವನ್ನು ಕೈಬಿಟ್ಟು ಆದೇಶ ಹೊರಡಿಸಿತ್ತು.

ಆದರೆ ಈ ಪಠ್ಯವನ್ನು ಶಿಕ್ಷಕರು ಬೋಧಿಸಿದ್ದು, ಮಕ್ಕಳೂ ಅಭ್ಯಾಸ ಮಾಡಿದ್ದರು. ಹೀಗಾಗಿ ಈ ಮೊದಲಿನ ಆದೇಶ ಹಿಂಪಡೆದು ಪ್ರಸಕ್ತ ಸಾಲಿಗೆ ಸೀಮೀತವಾಗಿ ಈ ಮೊದಲಿನಂತೆಯೇ ಪಠ್ಯ ಮುಂದುವರೆಸಲು ಆದೇಶ ಹೊರಡಿಸಲಾಗಿದೆ.