ದೆಹಲಿ: ಯುವತಿಗೆ ನಡು ರಸ್ತೆಯಲ್ಲೇ ಥಳಿಸಿ ಕಾರಿನಲ್ಲಿ ಕೂರುವಂತೆ ಒತ್ತಾಯ; ವಿಡಿಯೋ ವೈರಲ್

ದೆಹಲಿ: ಯುವತಿಗೆ ನಡು ರಸ್ತೆಯಲ್ಲೇ ಥಳಿಸಿ ಕಾರಿನಲ್ಲಿ ಕೂರುವಂತೆ ಒತ್ತಾಯ; ವಿಡಿಯೋ ವೈರಲ್

ವದೆಹಲಿ: ಮಂಗೋಲ್‌ಪುರಿ ಮೇಲ್ಸೇತುವೆ ಬಳಿ ವ್ಯಕ್ತಿಯೊಬ್ಬ ಯುವತಿಯನ್ನು ಥಳಿಸಿ ಬಲವಂತವಾಗಿ ಕಾರಿನಲ್ಲಿ ಕೂರುವಂತೆ ಒತ್ತಾಯ ಮಾಡುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

'ಪ್ರಾಥಮಿಕ ತನಿಖೆಯಲ್ಲಿ, ಕಾರನ್ನು ಗುರುಗ್ರಾಮ್‌ನ ರತನ್ ವಿಹಾರ್‌ನಲ್ಲಿ ನೋಂದಾಯಿಸಲಾಗಿದೆ ಎಂದು ಕಂಡುಬಂದಿದೆ.

ಅಲ್ಲಿಗೆ ಸಿಬ್ಬಂದಿಯ ತಂಡವನ್ನು ಕಳುಹಿಸಲಾಗಿದೆ' ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಾಲಕ ಮತ್ತು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇನ್ನೂ, ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.