ದಸರಾ ಅಂಬಾರಿ ಹೊತ್ತಿದ್ದ ಬಲರಾಮನಿಗೆ ಗುಂಡೇಟು
ಮೈಸೂರು ದಸರದಲ್ಲಿ 14 ಬಾರಿ ಅಂಬಾರಿ ಹೊತ್ತಿದ ಬಲರಾಮ ಆನೆಗೆ ಗುಂಡು ಹೊಡಿಯಲಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾಣಿ ಶಿಬಿರದಲ್ಲಿ ಬಲರಾಮ ಇದ್ದು ಪಕ್ಕದ ಜಮೀನಿಗೆ ಹೋಗಿದೆ. ಈ ವೇಳೆ ಸಿಟ್ಟಿಗೆದ್ದ ಜಮೀನು ಮಾಲೀಕ ಸುರೇಶ್ ಬಲರಾಮನ ಮೇಲೆ ಮನಸೋಇಚ್ಛೆ ಗುಂಡು ಹಾರಿಸಿದ್ದಾನೆ. ಈಗ ಸದ್ಯಕ್ಕೆ ಬಲರಾಮನಿಗೆ ಕಾಲು ತೊಡೆ ಹಾಗೂ ಹೊಟ್ಟೆಯ ಭಾಗ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಸುರೇಶ್ ನನ್ನ ಬಂಧಿಸಲಾಗಿದೆ.