ತರಕಾರಿ ದರದಲ್ಲಿ ಭಾರೀ ಏರಿಕೆ

ತರಕಾರಿ ದರದಲ್ಲಿ ಭಾರೀ ಏರಿಕೆ

ಬೆಂಗಳೂರು: ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಬಿಗ್‌ ಶಾಕ್‌ ಎದುರಾಗಿದ್ದು, ಮಳೆಯಿಂದಾಗಿ ತರಕಾರಿಗಳ ದರ ಏರಿಕೆಯಾಗಿದೆ. ಟೊಮೇಟೊ ದರ ಕೆ.ಜಿ.ಗೆ 12 ರೂ. ಇದ್ದದ್ದು, ಇದೀಗ 20-25 ರೂ.ಗೆ ಏರಿಕೆಯಾಗಿದೆ. ಕೆ.ಜಿ ಬೀನ್ಸ್‌ 20-30 ರೂ. ಇದ್ದದ್ದು, 40 ರೂ.ಗೆ ಏರಿಕೆಯಾಗಿದೆ. ಹೀರೆಕಾಯಿ, ಬದನೆಕಾಯಿ, ಸೊಪ್ಪುಗಳ ದರದಲ್ಲೂ ಹೆಚ್ಚಳವಾಗಿದೆ. ಬೀನ್ಸ್‌, ಮೆಣಸು, ಬೆಂಡೆಕಾಯಿ ಸೇರಿದಂತೆ ಉಳಿದ ಎಲ್ಲಾ ತರಕಾರಿಗಳ ದರವು ಕೆಜಿಗೆ 20 ರಿಂದ 30 ರೂ. ಏರಿಕೆ ಕಂಡಿದೆ.