ತಂದೆ ಸ್ಥಾನದಲ್ಲಿರುವ ದೇವೇಗೌಡರಿಗೆ ವಿಷ ಹಾಕುವ ಕೆಲಸ ಮಾಡಿದ್ದೀ ಶಿವಲಿಂಗು! ನಿನಗೆ ಆ ಶಾಪ ತಟ್ಟಲಿದೆ'

ತಂದೆ ಸ್ಥಾನದಲ್ಲಿರುವ ದೇವೇಗೌಡರಿಗೆ ವಿಷ ಹಾಕುವ ಕೆಲಸ ಮಾಡಿದ್ದೀ ಶಿವಲಿಂಗು! ನಿನಗೆ ಆ ಶಾಪ ತಟ್ಟಲಿದೆ'
‘ತಂದೆ ಸ್ಥಾನದಲ್ಲಿರುವ ದೇವೇಗೌಡರಿಗೆ ಈ ವಯಸ್ಸಿನಲ್ಲಿ ವಿಷ ಹಾಕುವ ಕೆಲಸ ಮಾಡಿದ್ದೀ ಶಿವಲಿಂಗು, ನಿನಗೆ ಆ ಶಾಪ ತಟ್ಟಲಿದೆ’ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಅರಸೀಕರೆ: ‘ತಂದೆ ಸ್ಥಾನದಲ್ಲಿರುವ ದೇವೇಗೌಡರಿಗೆ ಈ ವಯಸ್ಸಿನಲ್ಲಿ ವಿಷ ಹಾಕುವ ಕೆಲಸ ಮಾಡಿದ್ದೀ ಶಿವಲಿಂಗು, ನಿನಗೆ ಆ ಶಾಪ ತಟ್ಟಲಿದೆ’ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಪಟ್ಟಣದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಶಾಸಕ ಕೆ.ಎಂ. ಶಿವಲಿಂಗೇಗೌಡರು ದೇವೇಗೌಡರಿಗೆ ವಿಷ ನೀಡುವ ಕೆಲಸ ಮಾಡಿದ್ದಾರೆ. ಪಕ್ಷದ ಸೀಟು ಬೇಕು ಎಂದಾಗ ಗೌಡರು ಬೇಕು, ಲವ್ ಬೇಕು ಎಂದಾಗ ಸಿದ್ದರಾಮಯ್ಯನವರು ಬೇಕಾ, ಕಳೆದ ಒಂದು ವರ್ಷದಿಂದ ಜೆಡಿಎಸ್ನೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ, ರಾತ್ರಿ ಕಂಡ ಬಾವಿಗೆ ಹಗಲಿನಲ್ಲಿ ಬೀಳಲು ಹೋಗಿದ್ದೀಯಾ ಶಿವಲಿಂಗೇಗೌಡ, ದೇವೇಗೌಡರ ಶಾಪ ತಟ್ಟಲಿದೆ ನಿನಗೆ,’’ಎಂದು ವಾಗ್ದಾಳಿ ನಡೆಸಿದರು. ‘‘ತೆಂಗಿನ ಬೆಳೆಗಾರರ ಹೆಸರಿನಲ್ಲಿಉಪವಾಸ ಕುಳಿತು ನಾಟಕವಾಡಿದೆ.

ಅಲ್ಲೂ ಗೌಡರು ನಿನಗೆ ಸ್ಪಂದಿಸಿದ್ದನ್ನು ಮರೆತು ಕೆಲಸ ಮಾಡಿರುವುದು ಸರಿಯೇ,’’ ಎಂದು ಪ್ರಶ್ನಿಸಿದರು. ಇನ್ನೂ ಸಿ.ಎಂ ಇಬ್ರಾಹಿಂ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ಶಿವಲಿಂಗೇಗೌಡ , ಸಿ.ಎಂ.ಇಬ್ರಾಹಿಂ ಅವರೇ ತಾನೇ ಸಿದ್ರಾಮಣ್ಣರನ ಹೊರಗೆ ಕರ್ಕಂಡು ಬಂದು ಅಹಿಂದಾ ಕಟ್ಟಿದವರು. ಆಗ ದೇವೇಗೌಡರ ಬಗ್ಗೆ ಏನೇನ್ ಭಾಷಣ ಮಾಡಿದ್ರು ಅಂತ ಟೇಪ್ ಬೇಕಾ, ರೆಕಾರ್ಡ್ ಬೇಕಾ? ಎಂದು ಪ್ರಶ್ನಿಸಿದ್ದಾರೆ.

ಅವರು ದೇವೇಗೌಡರಿಗೆ ಒಂದು ಮಾತು ಮಾತಾಲಿಲ್ವಂತೆ ಇವತ್ತಿನವರೆಗೆ ಟೇಪ್ ಕೊಡಬೇಕಾ ಹೇಳಿ, ಸುಮ್ನೆ ಏಕೆ ಇಬ್ರಾಹಿಂ ಅಣ್ಣಾ ಮಾತಾಡಬೇಕು? ಅವರು ವಚನ ಸಾಹಿತ್ಯ ಓದಿದವರು, ನಾವೆಲ್ಲ ಮುಗ್ದರು ನಮಗೇನು ಗೊತ್ತಿಲ್ಲ. ಆಗ ದೇವೇಗೌಡರಿಗೆ ವಿಷ ಇಟ್ಟು ಇಬ್ರಾಹಿಂ, ಸಿದ್ದರಾಮಯ್ಯ ಅವರೆಲ್ಲಾ ಬಿಟ್ಟು ಹೋದ್ರಲಾ ಅವರು ಆಗ ವಿಷ ಕೊಟ್ಟು ಹೋಗಲಿಲ್ವಾ? ಹಿಂದೆ ಅಹಿಂದ ಕಟ್ಟಿದವರೇ ಇವರಲ್ವಾ, ಇವರೇ ಜೆಡಿಎಸ್ನ ವೀಕ್ ಮಾಡ್ದವ್ರಲ್ವಾ?

ಅವಾಗ ವಿಷ ಕೊಟ್ಟು ಹೋಗಲಿಲ್ವಾ? ಅಂತ ಖಾರವಾಗಿ ಪ್ರಶ್ನಿಸಿದ್ರು. ಈ ಭಾರಿ ಒಂದು ವಿಧಾನಸಭಾ ಕ್ಷೇತ್ರ ಹೋಗುತ್ತೆ ಅಂತ ಪಾಪದವನು ಸಿಕ್ಕಿದ್ದೀನಿ ಅಂತ ಆರೋಪ ಮಾಡ್ತವ್ರೆ. ನನ್ನ ಪಾಡಿಗೆ ನಾನಿರ್ತಿನಿ, ನಿಮ್ಮ ಪಾಡಿಗೆ ನೀವಿರಿ ಅಷ್ಟೇ.

ನಾನು ಏನು ಮಾತನಾಡಲ್ಲ, ನೀವು ಏನು ಮಾತಾಡಬೇಡಿ ಅಷ್ಟೇ" ಅಂತ ವಾರ್ನಿಂಗ್ ಕೊಟ್ಟಿದ್ದಾರೆ. ದೇವೇಗೌಡರನ್ನು ಎರಡು ದಿನ ನೋಡಲು ಹೋಗಿದ್ದೆ. ಆದ್ರೆ ಅವರು ಫಿಜಿಯೋಥೆರಪಿಯಲ್ಲಿ ಇದ್ರು ಸಿಗಲಿಲ್ಲ. ಫೋನ್ನಲ್ಲಿ ಮಾತಾಡಿದ್ರು, ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಬೇಜಾರ್ ಆಯ್ತು ಅಷ್ಟೇ ಅಂದೆ. ಎರಡು ಮೂರು ಸಾರಿ ಪ್ರಯತ್ನಿಸಿದ್ರೂ ನೇರವಾಗಿ ಮಾತನಾಡಲು ಆಗಲಿಲ್ಲ ಅಂತ ಬೇಸರ ವ್ಯಕ್ತ ಪಡಿಸಿದರು.