'ಡಾ.ಶಿವಕುಮಾರಶ್ರೀ'ಗಳಿಗೆ 'ಭಾರತ ರತ್ನ ಪ್ರಶಸ್ತಿ' ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು - ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

'ಡಾ.ಶಿವಕುಮಾರಶ್ರೀ'ಗಳಿಗೆ 'ಭಾರತ ರತ್ನ ಪ್ರಶಸ್ತಿ' ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು - ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ತುಮಕೂರು: ಡಾ.ಶಿವಕುಮಾರಶ್ರೀಗಳಿಗೆ ಭಾರತರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಹಲವು ದಿನಗಳ ಭಕ್ತರ ಒತ್ತಾಯಕ್ಕೆ ಸಿಎಂ ಸಮ್ಮತಿಯನ್ನು ಸೂಚಿಸಿದಂತೆ ಆಗಿದೆ. ಇಂದು ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನಿಮಿತ್ತ ತುಮಕೂರಿನ ಕ್ಯಾತಸಂದ್ರದ ಬಳಿಯಲ್ಲಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ದಾಸೋಹಕ್ಕೆ ಸರಳವಾಗಿ ಚಾಲನೆ ನೀಡಿದ ಬಳಿಕ ಮಾತನಾಡಿದಂತ ಅವರು, ಅನ್ನದಾಸೋಹ, ಅಕ್ಷರ ದಾಸೋಹ, ಆಶ್ರಯ ದಾಸೋಹದ ಕಾರ್ಯಕ್ರಮವನ್ನು ಇಂದು ಸಾಂಕೇತಿಕವಾಗಿ ಶ್ರೀಮಠದ ಆವರಣದಲ್ಲಿ ಚಾಲನೆ ಗೊಳಿಸಲಾಗಿದೆ. ಈ ದಾಸೋಹ ಪರಂಪರೆಯನ್ನು ಸರ್ಕಾರ ಗುರ್ತಿಸುತ್ತಿದೆ ಎನ್ನುವ ಕಾರಣಕ್ಕಾಗಿ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ ಎಂದರು. ಈ ದಾಸೋಹದ ಹಿಂದೆ ಎಲ್ಲರಿಗೂ ಅನ್ನ ಸಿಗಬೇಕು ಎನ್ನುವುದೇ ಆಗಿದೆ. ಮುಂದಿನ ದಿನಗಳಲ್ಲಿ ಸರ್ಕಾರವೇ ಹೊಸ ಸ್ವರೂಪದ ರೀತಿಯಲ್ಲಿ ಈ ದಾಸೋಹವನ್ನು ಜಾರಿಗೊಳಿಸೋ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಭಾರತ ರತ್ನ ಪ್ರಶಸ್ತಿ ಸಂಬಂಧ ವರಿಷ್ಠರ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದಾಗಿ ಹೇಳಿದರು.