ಟ್ವಿಟ್ಟರ್ನಲ್ಲಿ ಇನ್ನುಮುಂದೆ ಯಾರೂ ಕೂಡ ಲೈವ್ ಲೊಕೇಷನ್ ಹಂಚಿಕೊಳ್ಳುವಂತಿಲ್ಲ
ಟ್ವಿಟ್ಟರ್ ನಲ್ಲಿ ಸೈಬರ್ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, 'ಖಾತೆಯಲ್ಲಿ ಲೈವ್ ಲೊಕೇಷನ್ಗಳನ್ನು ಬಹಿರಂಗವಾಗಿ ಖಾತೆಯಲ್ಲಿ ಶೇರ್ ಮಾಡಿದರೆ ಖಾತೆಯನ್ನು ಅಮಾನತುಗೊಳಿಸಲಾಗುವುದು' ಎಂದು ಟ್ವಿಟ್ಟರ್ ಸಿಇಒ ಎಲಾನ್ ಮಸ್ಕ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮ್ಯೂಸಿಕ್ ಕಾರ್ಯಕ್ರಮಗಳು, ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ಸಾರ್ವಜನಿಕ ಈವೆಂಟ್ಗೆ ಸಂಬಂಧಿಸಿದ ಸ್ಥಳಗಳ ಮಾಹಿತಿ ಹಂಚಿಕೊಳ್ಳಲು ಅನುಮತಿ ನೀಡಿದ್ದಾಗಿ ತಿಳಿಸಿದ್ದಾರೆ.