ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ವೀರಪ್ಪನ್‌ ಸಹಚರ ಬಿಡುಗಡೆ

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ವೀರಪ್ಪನ್‌ ಸಹಚರ ಬಿಡುಗಡೆ

ಮೈಸೂರು: ಪಾಲಾರ್‌‌ ಬಾಂಬ್‌ ಸ್ಪೋಟ ಕೇಸ್‌‌ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ವೀರಪ್ಪನ್‌‌ ಸಹಚರ ಜ್ಞಾನಪ್ರಕಾಶ್‌ ಅವರು ಜಾಮೀನ ಮೇಲೆ ಇಂದು (ಡಿ.20) ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡರು. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ ಸುಪ್ರೀಂಕೋರ್ಟ್‌‌‌ ಮಾನವೀಯತೆ ಆಧಾರದ ಮೇಲೆ ನ.26ರಂದು ಜಾಮೀನು ಮಂಜೂರು ಮಾಡಿತ್ತು. ಶ್ಯೂರಿಟಿ & 5 ಲಕ್ಷ ಬಾಂಡ್‌‌ ಅನ್ನು ನ್ಯಾಯಲಯ ಪಡೆದಿತ್ತು. ಬಳಿಕ ಜ್ಞಾನ ಪ್ರಕಾಶ್‌‌ ಅವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು