ಜಾರ್ಖಂಡಿನ ಧನ್ ಬಾದ್ ಮಾರುಕಟ್ಟೆಯಲ್ಲಿ ಬಾಂಬ್ ಸ್ಪೋಟ : ನಾಲ್ವರಿಗೆ ಗಂಭೀರ ಗಾಯ

ಜಾರ್ಖಂಡಿನ ಧನ್ ಬಾದ್ ಮಾರುಕಟ್ಟೆಯಲ್ಲಿ ಬಾಂಬ್ ಸ್ಪೋಟ : ನಾಲ್ವರಿಗೆ ಗಂಭೀರ ಗಾಯ

ಜಾರ್ಖಂಡ್‌ : ಮಾರುಕಟ್ಟೆಯೊಂದರಲ್ಲಿ ಬೈಕ್ ಕ್ಯಾರಿಯರ್ ನಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾರ್ಖಂಡಿನ ಧನ್‌ಬಾದಿನಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ತನ್ನ ಬೈಕ್‌ಗೆ ಅಳವಡಿಸಲಾಗಿದ್ದ ಲಗೇಜ್ ಕ್ಯಾರಿಯರ್‌ನಲ್ಲಿ ಬಾಂಬ್ ಇಟ್ಟು ತರಕಾರಿ ಖರೀದಿಸಲು ಮಾರುಕಟ್ಟೆಗೆ ತೆರಳಿದ್ದರು.

ಆ ವೇಳೆ ಬಾಂಬ್ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದಲ್ಲಿ ಮೂವರು ತರಕಾರಿ ವ್ಯಾಪಾರಿಗಳು ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ಶಹೀದ್ ನಿರ್ಮಲ್ ಮಹತೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದ ಸ್ಥಳಕ್ಕೆ ಪೊಲೀಸರು ಧಮಿಸಿದ್ದು, ಪ್ರದೇಶವನ್ನು ಬಂದ್ ಮಾಡಿದ್ದಾರೆ ಎನ್ನಲಾಗುತ್ತಿದೆ.