ಚೆನ್ನೈ ಮೂಲದ ʻಐ ಡ್ರಾಪ್ಸ್ʼ ಬಳಕೆಯಿಂದ ವ್ಯಕ್ತಿ ಸಾವು, ಉತ್ಪಾದನೆ ಸ್ಥಗಿತಗೊಳಿಸಿದ ಕಂಪನಿ

ಚೆನ್ನೈ ಮೂಲದ ʻಐ ಡ್ರಾಪ್ಸ್ʼ ಬಳಕೆಯಿಂದ ವ್ಯಕ್ತಿ ಸಾವು, ಉತ್ಪಾದನೆ ಸ್ಥಗಿತಗೊಳಿಸಿದ ಕಂಪನಿ

ವದೆಹಲಿ: ಚೆನ್ನೈ ಮೂಲದ ಔಷಧೀಯ ಕಂಪನಿ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಯುಎಸ್ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಣ್ಣಿನ ಹನಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ. ಸಂಭಾವ್ಯ ಬ್ಯಾಕ್ಟೀರಿಯಾದ ಮಾಲಿನ್ಯದಿಂದಾಗಿ ಈ ಕಣ್ಣಿನ ಹನಿಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಆ ದೇಶದ ನಿಯಂತ್ರಕರು ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಮತ್ತು ರಾಜ್ಯ ಡ್ರಗ್ ಕಂಟ್ರೋಲರ್ (ಕೇಂದ್ರ ಮತ್ತು ರಾಜ್ಯದಿಂದ ತಲಾ ಮೂರು ಅಧಿಕಾರಿಗಳು) ತಂಡಗಳು ಚೆನ್ನೈನಿಂದ ದಕ್ಷಿಣಕ್ಕೆ 40 ಕಿಮೀ ದೂರದಲ್ಲಿರುವ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಪ್ಲಾಂಟ್‌ಗೆ ಹೋಗಿ ಪರಿಶೀಲಿಸಲಿದೆ ಎಂದು ಮಾದ್ಯಮಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ, ಅಮೆರಿಕದಲ್ಲಿ ಭಾರತೀಯ ಮೂಲದ ಈ ಐ ಡ್ರಾಪ್ ವಿವಾದದಲ್ಲಿದ್ದು, ಸೋಂಕಿನಿಂದ ಹಲವಾರು ಜನರಿಗೆ ಅಪಾಯವನ್ನುಂಟು ಮಾಡಿದ ಪ್ರಕರಣಗಳು ವರದಿಯಾದ ಬೆನ್ನಲ್ಲೇ, ಭಾರತೀಯ ಕಂಪನಿ ಗ್ಲೋಬಲ್ ಫಾರ್ಮಾ ಹೆಲ್ತ್‌ಕೇರ್ ಕಣ್ಣಿನ ಹನಿಗಳನ್ನು ಹಿಂಪಡೆದಿದೆ. ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಈ ಬಗ್ಗೆ ಮಾಹಿತಿ ನೀಡಿದೆ. ಈ ಔಷಧವು ದೃಷ್ಟಿ ನಷ್ಟ ಮತ್ತು ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾದ ನಂತರ US ಮಾರುಕಟ್ಟೆಯಿಂದ ತನ್ನ ಕಣ್ಣಿನ ಹನಿಗಳನ್ನು(eye drops) ಹಿಂಪಡೆದಿದೆ ಎಂದು FDA(ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ) ಹೇಳುತ್ತದೆ.

ಚೆನ್ನೈ ಮೂಲದ ಕಂಪನಿಯು ಮಾಲಿನ್ಯದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೃತಕ ಕಣ್ಣೀರಿನಿಂದ ರೂಪಿಸಲಾದ ಕಣ್ಣಿನ ಹನಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುತ್ತಿದೆ ಎಂದು ಎಫ್‌ಡಿಎ ಹೇಳಿಕೆಯಲ್ಲಿ ತಿಳಿಸಿದೆ. Ezricare, LLC ಮತ್ತು Delsum Pharma ಈ ಕಣ್ಣಿನ ಹನಿಗಳನ್ನು ಯುಎಸ್‌ನಲ್ಲಿ ವಿತರಿಸುತ್ತವೆ.

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಭಾರತೀಯ ಫಾರ್ಮಾಸ್ಯುಟಿಕಲ್ ಕಂಪನಿಯ ಐ ಡ್ರಾಪ್ಸ್‌ನಿಂದ ಹಲವಾರು ಯುಎಸ್ ರಾಜ್ಯಗಳಲ್ಲಿ ವಿವಿಧ ಕಣ್ಣಿನ ಸೋಂಕುಗಳ ಬಗ್ಗೆ ಎಫ್‌ಡಿಎಗೆ ಎಚ್ಚರಿಕೆ ನೀಡಿತ್ತು. ಎಫ್‌ಡಿಎ ಹೊರಡಿಸಿದ ಹೇಳಿಕೆಯಲ್ಲಿ, ಇದುವರೆಗೆ ವರದಿಯಾಗಿರುವ ಪ್ರಕರಣಗಳಲ್ಲಿ ಅನೇಕ ಜನರು ದೃಷ್ಟಿ ಕಳೆದುಕೊಂಡಿದ್ದಾರೆ, ಹಲವರಿಗೆ ಕಣ್ಣಿನ ಸೋಂಕು ಮತ್ತು ಕಣ್ಣಿನಲ್ಲಿ ಅತಿಯಾದ ರಕ್ತಸ್ರಾವದಿಂದ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕಣ್ಣುಗಳನ್ನು ಕಿರಿಕಿರಿಯಿಂದ ರಕ್ಷಿಸಲು ಅಥವಾ ಕಣ್ಣುಗಳ ಶುಷ್ಕತೆಯನ್ನು ತೆಗೆದುಹಾಕಲು ಈ ಐ ಡ್ರಾಪ್ ಅನ್ನು ಬಳಸಲಾಗುತ್ತದೆ.