ಸಿದ್ದರಾಮೋತ್ಸವಕ್ಕೆ' ಟಕ್ಕರ್ ಕೊಡಲು ಬಿಜೆಪಿ ಪ್ಲಾನ್ : ದಾವಣಗೆರೆಯಲ್ಲಿ `ಮಹಾ ಸಂಗಮ'ಕ್ಕೆ ಸಿದ್ಧತೆ!

ಸಿದ್ದರಾಮೋತ್ಸವಕ್ಕೆ' ಟಕ್ಕರ್ ಕೊಡಲು ಬಿಜೆಪಿ ಪ್ಲಾನ್ : ದಾವಣಗೆರೆಯಲ್ಲಿ `ಮಹಾ ಸಂಗಮ'ಕ್ಕೆ ಸಿದ್ಧತೆ!

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ವಿಜಯ ಸಂಕಲ್ಪ ಯಾತ್ರೆ ಆರಂಭಿಸಿರುವ ಬಿಜೆಪಿ ಇದೀಗ ದಾವಣಗೆರೆಯಲ್ಲಿ ಸಿದ್ದರಾಮೋತ್ಸವಕ್ಕೆ ಟಕ್ಕರ್ ಕೊಡಲು ಸಿದ್ಧತೆ ನಡೆಸಿದೆ.

ಹೌದು, ಫೆಬ್ರವರಿ ತಿಂಗಳ ಅಂತ್ಯದಿಂದ ರಾಜ್ಯದ ನಾಲ್ಕು ಭಾಗಗಳಿಂದ ರಥಯಾತ್ರೆ ಮಾದರಿಯ ವಿಜಯ ಸಂಕಲ್ಪ ಯಾತ್ರೆ ಆರಂಭಿಸಲಿದೆ.

ಮಾರ್ಚ್ ಮೂರನೇ ವಾರದ ವೇಳೆಗೆ ಈ ಯಾತ್ರೆ ದಾವಣಗೆರೆಯಲ್ಲಿ ಅಂತ್ಯಗೊಂಡು ಮಹಾ ಸಂಗಮ ನಡೆಯಲಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ವಿಜಯಸಂಕಲ್ಪ ಯಾತ್ರೆ ಸಲುವಾಗಿ ವಿವಿಧ ನಾಯಕರನ್ನು ಒಳಗೊಂಡ 4 ತಂಡಗಳನ್ನು ರಚಿಸಲಾಗುತ್ತದೆ. ಈ ನಾಲ್ಕು ತಂಡಗಳು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆ ಮೈಸೂರು ಪ್ರದೇಶದಲ್ಲಿ ಎರಡು ಭಾಗಗಳಾಗಿ ಪ್ರವಾಸ ಕೈಗೊಳ್ಳಲಾಗುವುದು. ಬಳಿಕ ದಾವಣಗೆರೆಯಲ್ಲಿ ಮಹಾಸಂಗಮ ನಡೆಯಲಿದೆ ಎಂದು ಹೇಳಿದ್ದಾರೆ.