ಚಿತ್ರ ಪ್ರೇಮಿಗಳಿಗೆ ಗುಡ್ ನ್ಯೂಸ್

ಜ. 20ರಂದು ‘ಸಿನಿಮಾ ಲವರ್ಸ್ ಡೇ’ ಆಚರಿಸಲಾಗುತ್ತಿದ್ದು, ಈ ಪ್ರಯುಕ್ತ ಅಂದು ಪಿವಿಆರ್ನಲ್ಲಿ ಪ್ರದರ್ಶನ ಆಗುವ ಎಲ್ಲಾ ಸಿನಿಮಾಗಳ ಟಿಕೆಟ್ ಬೆಲೆಯನ್ನು ಕೇವಲ 99 ರೂ.ಗೆ ನಿಗದಿ ಮಾಡಲಾಗಿದೆ. ಈಗಾಗಲೇ ಪಿವಿಆರ್ ಮಲ್ಟಿಪ್ಲೆಕ್ಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳಿಗೆ ಅನುಕೂಲ ಆಗಲಿದೆ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ 100 ರೂ. ಟಿಕೆಟ್ ಬೆಲೆ ಜೊತೆಗೆ ಜಿಎಸ್ಟಿ ಕೂಡ ಇರಲಿದೆ. ತೆಲಂಗಾಣದಲ್ಲಿ 112 ರೂ. + ಜಿಎಸ್ಟಿ ಸೇರ್ಪಡೆ ಆಗಲಿದೆ.