ಚಾಲೆಂಜಿಂಗ್ ಸ್ಟಾರ್ ದರ್ಶನ ಮೇಲೆ ಚಪ್ಪಲಿ ಎಸೆದ ಪ್ರಕರಣ : ಮೂವರು ಅರೆಸ್ಟ್

ಡಿಸೆಂಬರ್ 18ರ ರಾತ್ರಿ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ದರ್ಶನ್ ತೂಗುದೀಪ, ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ ಪ್ರಮೋಷನ್‌ಗೆ ಚಿತ್ರತಂಡ ಬಂದಿತ್ತು. ಈ ವೇಳೆ ನಟ ದರ್ಶನ್ ಮೇಲೆ ಚಪ್ಪಲಿ ಎಸೆದು ಗಲಾಟೆ ಸೃಷ್ಟಿಸಿದ್ದರು. ಈ ಪ್ರಕರಣ ಬಗ್ಗೆ ಇಡೀ ಕನ್ನಡ ಚಿತ್ರರಂಗದ ಅಭಿಮಾನಿಗಳು ಸಿಡಿದೆದ್ದಿದ್ದರು. ಇದೀಗ ಸಂಬಂಧ ಮೂವರನ್ನು ವಿಜಯಪುರ ಜಿಲ್ಲೆ ಹೊಸಪೇಟೆ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಹಚ್ಚುವ ಕುರಿತು ಮೂರು ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಈ ತಂಡದವರು ಭಾನುವಾರ ಪ್ರಕರಣ ಸಂಬಂಧ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.