ಬೆಳಗಾವಿಯಲ್ಲಿ ವಿದ್ಯಾರ್ಥಿನಿಯರ ಜೊತೆ ಶಿಕ್ಷಕನ ಅಸಭ್ಯ ವರ್ತನೆ; ಕಾಮುಕ ಶಿಕ್ಷಕನ ವಿರುದ್ಧ ಕೇಸ್

ಬೆಳಗಾವಿಯಲ್ಲಿ ವಿದ್ಯಾರ್ಥಿನಿಯರ ಜೊತೆ ಶಿಕ್ಷಕನ ಅಸಭ್ಯ ವರ್ತನೆ; ಕಾಮುಕ ಶಿಕ್ಷಕನ ವಿರುದ್ಧ ಕೇಸ್

ಬೆಳಗಾವಿ: ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತಿಸಿ, ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಇದೀಗ ಕಾಮುಕ ಶಿಕ್ಷಕನ ವಿರುದ್ಧ ಕೇಸ್ ದಾಖಲಾಗಿದೆ.

ಪ್ರೌಢ ಶಾಲೆಯ ಕನ್ನಡ ಮಾಧ್ಯಮದ ಶಿಕ್ಷಕ ಬಿ.ಆರ್. ಬಾಡಕರ 10ನೇ ತರಗತಿಯ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಕಾರಣಕ್ಕೆ ವಿದ್ಯಾರ್ಥಿನಿ ಡಿ.23 ರಂದು ಶಿಕ್ಷಕನ ವಿರುದ್ಧ ದೂರು ನೀಡಿದ್ದಾಳೆ.

ಅಲ್ಲದೇ ಕಾಮುಕ ಶಿಕ್ಷಕ ಬಾಡಕರ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವನ್ನೂ ನಡೆಸಿದ್ದಾನೆ. ಈ ವಿಷಯ ಯಾರಿಗಾದ್ರೂ ಹೇಳಿದ್ರೆ ಇಂಟರ್‌ನಲ್ ಅಂಕಗಳನ್ನ ಕಡಿತಗೊಳಿಸೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಶಿಕ್ಷಕನ ಈ ಕೃತ್ಯಕ್ಕೆ ಸಹಕರಿಸಿದ ಮತ್ತೊಬ್ಬ ಶಿಕ್ಷಕ ಕೆ.ಎಂ ಕೋಳಿ ವಿರುದ್ಧವೂ ದೂರು ನೀಡಲಾಗಿತ್ತು.