ಗ್ರಾಹಕರ ಜೊತೆಯ ಸನ್ಮಾನ ದೊಂದಿಗೆ ಗ್ರಾಹಕರ ಕುಂದು ಕೊರತೆ ನೀಗಿಸಿದ, ರಿಯಾಜ್ ಅಹ್ಮದ್.
ಕಾರಟಗಿ: ತಾಲೂಕಿನ ಜೆಸ್ಕಾಂ ವತಿಯಿಂದ ಗ್ರಾಹಕರ ಕುಂದು ಕೊರತೆ ಸಭೆ ಜೆಸ್ಕ ಕಚೇರಿಯಲ್ಲಿ ನಡೆಸಲಾಯಿತು. ಗಂಗಾವತಿ ವಿಭಾಗದ ನೂತನ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರು ಆದ ಶ್ರೀ ರಿಯಾಜ್ ಅಮ್ಮದ್ ಇವರಿಗೆ ಗ್ರಾಹಕರು ಸನ್ಮಾನ ಮಾಡಿದರು ಮೂಲಕ ತಮ್ಮ ಕುಂದುಕೊರತೆಗಳನ್ನು ಹೇಳಿಕೊಂಡರು. ನಂತರ ಕಾರಟಿಗಿ ತಾಲೂಕಿನ ಎಇ ಅಧಿಕಾರಿಗಳಾದ
ನೂರುಪಾತಿಮಾ ಇವರು ಹಿರಿಯ ಅಧಿಕಾರಿಗಳೊಂದಿಗೆ ತಮ್ಮ ಸಂಭಾಷಣೆ ಮೂಲಕ ಅಧಿಕಾರಿಗಳು ತಾಲೂಕಿನ ಗ್ರಾಹಕರ ಕೊರತೆಗೆ ಸ್ಪಂದಿಸಿದೆ ಅಲ್ಲಿನ ಕುಂದು ಕೊರತೆಗಳಿಗೆ ಕೂಡಲೇ ಪರಿಹಾರ ನೀಗಿಸುವಲ್ಲಿ ಯಶಸ್ವಿ ಹೊಂದಿದ್ದಾರೆ. ಆದ್ದರಿಂದ ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ಯಾವದೇ ರೀತಿಯಲ್ಲಿ ನಮಗೆ ಹೇಳಿದರೆ ನಾವು ನಿಮ್ಮ ಕೊರತೆಯನ್ನು ನೀಗಿಸಲು ಸದಾ ಸಿದ್ಧರಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕೆ.ನಾಗರಾಜ್ ಸಹಾಯಕ ನಿರ್ವಾಹಕ ಅಭಿಯಂತರರು. ಎಇ ನೂರು ಫಾತಿಮಾ, ನಾಗಪ್ಪ ನವಲಿ ಜೆಸ್ಕಾಂ ಅಧಿಕಾರಿಗಳು. ಪ್ರಸಾದ ಕಿರಿಯ ಅಭಿಯಂತರರು ಎಸ್ಆರ್ ನಗರ, ಮಾಂತೇಶ್ ತುಂಬಾ, ಕುಮಾರಿ ದ್ರಾಕ್ಷಾಯಣಿ ಕಿರಿಯ ಅಭಿಯಂತರರು ಬೂದಗುಂಪ, ಬಸವರಾಜ್ ಸಿಂಗನಾಳ, ಜೆಸ್ಕಾಂನ ತಾಲೂಕು ಹಾಗೂ ಕಚೇರಿ ಅಧಿಕಾರಿಗಳು ತಾಲೂಕು ಸುತ್ತಮುತ್ತಲಿನ ಗ್ರಾಮದ ಗ್ರಾಹಕರು ಭಾಗವಹಿಸಿದ್ದರು