ಖ್ಯಾತ ನಟ 'ನಂದಿಮೂರಿ ತಾರಕರತ್ನ' ಆರೋಗ್ಯ ಸ್ಥಿತಿ ಚಿಂತಾಜನಕ ; 'ಕಲ್ಯಾಣ್ ರಾಮ್' ಭಾವನಾತ್ಮಕ ಪೋಸ್ಟ್
ಕೆಎನ್ಎನ್ ಡಿಜಿಟಲ್ ಡೆಸ್ಕ್ : ಟಾಲಿವುಡ್ ಖ್ಯಾತ ನಟ, ನಂದಮೂರಿ ಕುಟುಂಬದ ವಾರಸುದಾರ ಹಾಗೂ ತಾರಕರತ್ನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಬಹಿರಂಗಪಡಿಸಿದ ಸತ್ಯ ಕೇಳಿ ಅಭಿಮಾನಿಗಳು ಸೇರಿ ಕುಟುಂಬ್ಥರು ಕಂಗಾಲಾಗಿದ್ದಾರೆ.
ಅದ್ರಂತೆ, ಸಧ್ಯ ಮತ್ತೊಬ್ಬ ನಂದಮೂರಿ ನಾಯಕ ಹಾಗೂ ನಿರ್ಮಾಪಕ ನಂದಮೂರಿ ಕಲ್ಯಾಣ್ ರಾಮ್ ಭಾವನಾತ್ಮಕ ಪೋಸ್ಟ್ ಹಾಕಿ, ಬೇಗ ಗುಣಮುಖರಾಗಿ ಎಂದು ಹಾರೈಸಿದ್ದಾರೆ.
ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ನಂದಮೂರಿ ಕಲ್ಯಾಣ್ ರಾಮ್.. 'ನನ್ನ ಸಹೋದರ ನಂದಮೂರಿ ತಾರಕರತ್ನ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಶೀಘ್ರ ಗುಣಮುಖರಾಗಿ ಪೂರ್ಣ ಆರೋಗ್ಯದಿಂದ ಮರಳಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಇದನ್ನ ಕಂಡು ತಾರಕರತ್ನ ಆರೋಗ್ಯ ಸುಧಾರಿಸಲಿ ಎಂದು ಎಲ್ಲರೂ ಬಯಸುತ್ತಿದ್ದಾರೆ.
ಅಂದ್ಹಾಗೆ, ನಾರಾ ಲೋಕೇಶ್ ಯುವಗಳಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾರಕರತ್ನ ಅವರಿಗೆ ಪಾದಯಾತ್ರೆ ವೇಳೆ ಹೃದಯಾಘಾತವಾಗಿದ್ದು, ಬೆಂಗಳೂರು ನಾರಾಯಣ ಹೃದಯಾಲಯದ ವಿಶೇಷ ವೈದ್ಯಕೀಯ ತಂಡ ಚಿಕಿತ್ಸೆ ನೀಡುತ್ತಿದೆ.