ಕ್ರಾಂತಿ' ಚಿತ್ರದ ಪ್ರಮೋಷನ್ ವೇಳೆ ಅವಘಡ; ಅಭಿಮಾನಿ ಕಾಲಿನ ಮೇಲೆ ಹರಿದ ಲಾರಿ

ಕ್ರಾಂತಿ' ಚಿತ್ರದ ಪ್ರಮೋಷನ್ ವೇಳೆ ಅವಘಡ; ಅಭಿಮಾನಿ ಕಾಲಿನ ಮೇಲೆ ಹರಿದ ಲಾರಿ

ಬೆಂಗಳೂರು: ದರ್ಶನ್ ಅಭಿನಯದ 'ಕ್ರಾಂತಿ' ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಲಾರಿ ಕಾಲ ಮೇಲೆ ಹರಿದು ಅಭಿಮಾನಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ವಾಲ್ಮೀಕಿ ವೃತ್ತದಲ್ಲಿ ನಡೆದ ಕಾರ್ಯಕ್ರಮಕ್ಕೆ ಲಾರಿಯನ್ನೇ ವೇದಿಕೆಯನ್ನಾಗಿ ಮಾಡಲಾಗಿತ್ತು. ಲಾರಿ ತಿರುವು ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಯುವಕನ ಕಾಲಿನ ಮೇಲೆ ಹರಿದಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ದರ್ಶನ್ ಆಗಮಿಸುವ ಮುನ್ನವೇ ಅವಘಡ ಸಂಭವಿಸಿತ್ತು.