ಕ್ರಶ್ ಮದ್ವೆ ಆಯ್ತು ಸುದೀಪ್ ಮಗಳಿಗೆ ಫುಲ್ ಬೇಜಾರು

ಕ್ರಶ್ ಮದ್ವೆ ಆಯ್ತು ಸುದೀಪ್ ಮಗಳಿಗೆ ಫುಲ್ ಬೇಜಾರು

ಎಲ್ಲರಿಗೂ ಒಬ್ಬರು ಕ್ರಶ್ ಇದ್ದೇ ಇರುತ್ತಾರೆ.

ಇದೇ ನಟ, ಇದೇ ನಟಿ ಅಂದ್ರೆ ಭಾರೀ ಇಷ್ಟ ಅನ್ನೋ ಕ್ರೇಜ್ ಎಲ್ಲರಲ್ಲೂ ಇರುತ್ತದೆ. ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಅವರ ಮಗಳಿಗೂ ಈ ಥರ ಒಬ್ಬ ಕ್ರಶ್ ಇದ್ರು. ವಿಷ್ಯ ಏನಪ್ಪಾ ಅಂದ್ರೆ ಅವರಿಗೆ ಈಗ ಮದುವೆಯಾಗಿದೆ.ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮದುವೆ ಫೋಟೋಗಳು ವೈರಲ್‌ ಆಗುತ್ತಿವೆ. ಬಾಲಿವುಡ್‌ ಸೆಲೆಬ್ರಿಟಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಅದ್ಧೂರಿ ಮದುವೆ ಮುಗಿಸಿ ಜೋಡಿ ಮುಂಬೈಗೆ ಬಂದಾಗಿದೆ. ಈ ಮಧ್ಯೆ ಗಮನ ಸೆಳೆದಿದ್ದು ಕಿಚ್ಚ ಸುದೀಪ್‌ ಅವರ ಮಗಳು ಸಾನ್ವಿ ಸುದೀಪ್ ಅವರ ಇನ್‌ಸ್ಟಾಗ್ರಾಮ್‌ ಸ್ಟೋರಿ.ಯುವತಿಯರಿಗೆ ಕಿಚ್ಚನ ಮೇಲೆ ಕ್ರಶ್. ಕಿಚ್ಚನ ಪ್ರೀತಿಯ ಮಗಳಿಗೆ ಯಾರ ಮೇಲೆ ಕ್ರಶ್ ಗೊತ್ತೇ? ಸುದೀಪ್ ಮಗಳು ಸಾನ್ವಿ ಅವರ ಕ್ರಶ್ ಸಿದ್ಧಾರ್ಥ್ ಮಲ್ಹೋತ್ರಾ ಮದುವೆಯಾಗಿದೆ.ಸುದೀಪ್‌ ಮಗಳು ಸಾನ್ವಿ ಅವರಿಗೆ ಕಿಯಾರಾ ಅವರ ಪತಿ ಸಿದ್ಧಾರ್ಥ್‌ ಮಲ್ಹೋತ್ರಾ ಮೇಲೆ ಕ್ರಶ್‌ ಅಂತೆ. ಸಿಡ್ ಮದ್ವೆಯಾಗ್ತಿದ್ದಂತೆ ಸಾನ್ವಿ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಕೂಡಾ ಶೇರ್ ಮಾಡಿದ್ದಾರೆ.ಸಿದ್ಧಾರ್ಥ್‌ ಮಲ್ಹೋತ್ರಾ ಅವರ ವಿಡಿಯೋ, ಫೋಟೋ, ಮೀಮ್ಸ್‌ಗಳನ್ನು ಸ್ಟೋರಿ ಹಾಕಿದ್ದಾರೆ ಸಾನ್ವಿ. ನನ್ನ ಕ್ರಶ್ ಮದ್ವೆಯಾಗ್ತಿದೆ. ಅಲೆಕ್ಸಾ ಚನ್ನಾ ಮೇರೆಯಾ ಪ್ಲೇ ಮಾಡು!ಎಂದು ಬರೆದಿರೋ ಮೆಮ್ಸ್ ಕೂಡಾ ಶೇರ್ ಮಾಡಿದ್ದಾರೆ. ಇದರ ಜೊತೆ ಅಳುವ ಎಮೋಜಿಯನ್ನು ಹಾಕಿ ಸಾನ್ವಿ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿದ್ದಾರೆ.ಸಾನ್ವಿ ಸುದೀಪ್ ತಮ್ಮ ಕ್ರಶ್ ಮದುವೆಯಾಗಿದ್ದಕ್ಕೆ ಲೈಟಾಗಿ ಬೇಜಾರ್ ಮಾಡ್ಕೊಂಡಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಅಂತೂ ಸಾನ್ವಿ ಕ್ರಶ್ ಯಾರು ಅನ್ನೋದು ಈ ಮೂಲಕ ರಿವೀಲ್ ಆಗಿದೆ.