ಕೇರಳದ ಕೋಟಯಂನಲ್ಲಿ ಹಕ್ಕಿ ಜ್ವರ ಹೆಚ್ಚಳ : ನೂರಾರು ಕೋಳಿಗಳ ಮಾರಣಹೋಮ
ಕೇರಳ : ಡೆಡ್ಲಿ ಕೊರೊನಾ ರಣಕೇಕೆ ನಿಂತ ಬೆನ್ನಲ್ಲೆ ಇದೀಗ ಕೇರಳದ ಕೋಟಯಂನಲ್ಲಿ ಹಕ್ಕಿ ಜ್ವರದ ರಣಕೇಕೆ ಹೆಚ್ಚಳಗೊಂಡಿದ್ದು ಮತ್ತಷ್ಟು ಆತಂಕ ಮನೆ ಮಾಡಿದೆ.
ಕೇರಳದ ಕೋಟಯಂ ಜಿಲ್ಲೆಯ ಎರಡು ಗ್ರಾಮಗಳ ನಿವಾಸಿಗಳಲ್ಲಿ ಹಕ್ಕಿ ಜ್ವರ ಕಂಡು ಬಂದಿದ್ದು, ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ರೋಗ ವ್ಯಾಪಕವಾಗಿ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಗ್ರಾಮಗಳ ವ್ಯಾಪ್ತಿಯಲ್ಲಿ ನೂರಾರು ಕೋಳಿಗಳ ಮಾರಣಹೋಮ ಮಾಡಲಾಗಿದೆ. ಈ ಕುರಿತು ಯಾವುದೇ ಆತಂಕ ಬೇಡ. ಹಕ್ಕಿ ಜ್ವರ ನಿಯಂತ್ರಣಕ್ಕೆ ಬರಲಿದೆ ಎಂದು ಆರೋಗ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ.
ಬಾತುಕೋಳಿಗಳು ವಾಸಿಸುವ ಕೊಳಗಳ ಸುತ್ತ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಹಕ್ಕಿ ಜ್ವರದ ಸೋಂಕು ಕಾಣಿಸಿಕೊಂಡಿದ್ದು, ಈ ಕಾರಣದಿಂದ ಈ ಭಾಗದಲ್ಲಿ ಸಾಕು ಪಕ್ಷಿಗಳನ್ನು ಕೊಲ್ಲಲಾಗುತ್ತಿದೆ. ಈ ಪ್ರದೇಶದಿಂದ ಬೇರೆ ರೋಗ ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ಕೋಳಿ ಸಾಕಾಣಿಕೆದಾರರಿಗೂ ಇದ್ರಿಂದ ಬಿಸಿ ತಟ್ಟುವ ಸಾಧ್ಯತೆಯಿದ್ದು, ಮಾರಾಟಕ್ಕೂ ನಿರ್ಬಂಧ ಹೇರುವ ಎಲ್ಲಾ ಸಾಧ್ಯತೆಗಳಿವೆ ಎಂದು ಮಾಹಿತಿ ಬಹಿರಂಗವಾಗಿದೆ.
ಸ್ಥಳೀಯ ಜಿಲ್ಲೆಗಳಲ್ಲೂ ಕೂಡಲೇ ಕೊರೊನಾ ಮಾತ್ರವಲ್ಲ ಇದೀಗ ಕಾಡುವ ಹಕ್ಕಿ ಜ್ವರಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ