ಕೆಜಿಎಫ್‌ ಸ್ಟೈಲ್‌ನಲ್ಲಿ ಹೊಸ ಕಂಪನಿ ಹೆಸರೇಳಿದ ಡ್ರೋನ್‌ ಪ್ರತಾಪ್‌

ಕೆಜಿಎಫ್‌ ಸ್ಟೈಲ್‌ನಲ್ಲಿ ಹೊಸ ಕಂಪನಿ ಹೆಸರೇಳಿದ ಡ್ರೋನ್‌ ಪ್ರತಾಪ್‌

ಬೆಂಗಳೂರು : ಡ್ರೋನ್‌ ಪ್ರತಾಪ್‌ ಮತ್ತೇ ಸುದ್ದಿಯಲ್ಲಿದ್ದು, ಹೊಸ ಡ್ರೋನ್‌ ಕಂಪನಿ ತೆರೆಯುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಮಗೆ ಬೆಂಬಲ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಡ್ರೋನ್‌ ಕಂಡು ಹಿಡಿದಿರುವುದಾಗಿ ಅದೇಷ್ಟೋ ಗಣ್ಯ ವ್ಯಕ್ತಿಗಳನ್ನು ಮತ್ತು ರಾಜಕೀಯ ದರೀಣರನ್ನು ಹಾಗೂ ಸಂಘ ಸಂಸ್ಥೆಗಳಿಗೆ ಮಣ್ಣೇರಚಿದ್ದ ಎಂಬ ವಿಚಾರ ಜನ ಬಾಯಲ್ಲಿ ಇಂದಿಗೂ ಹರಿದಾಡುತ್ತಿದೆ. ಆದ್ರೆ ಅದ್ಯಾವುದೂ ನಿಜವಲ್ಲ ಎಲ್ಲಾ ಸುಳ್ಳು ಎಂದು ಪ್ರತಾಪ್‌ ಇಂದಿಗೂ ವಾದಿಸುತ್ತಾರೆ. ಅದೇನೇ ಇರಲಿ ಸದ್ಯ ಪ್ರತಾಪ್‌ ಹೊಸ ಕಂಪನಿ ಜೊತೆ ಜನರ ಮುಂದೆ ಬಂದಿದ್ದಾರೆ.