ಕುಡಿಯಲು ಹಣ ಕೊಡಲಿಲ್ಲ ಎಂದು ತಾತನನ್ನೇ ಕೊಲೆಗೈದ ಮೊಮ್ಮಗ
ಬೆಂಗಳೂರು: ಯುವಕನೊಬ್ಬ ಕುಡಿಯಲು ಹಣ ಕೊಡಲಿಲ್ಲ ಎಂದು ತನ್ನ ತಾತನನ್ನೇ ಕೊಲೆ ಮಾಡಿದ್ದಾನೆ.
ಆಯಂಟೋನಿ ಜೋಸೆಫ್ ಅವರ ನೇರ ಮೊಮ್ಮಗನೇನಲ್ಲ. ಜೋಸೆಫ್ ಅವರ ಅಕ್ಕನ ಮೊಮ್ಮಗ. ಆದರೆ, ಅಕ್ಕನ ಮೊಮ್ಮಗನನ್ನೂ ತನ್ನ ಮೊಮ್ಮಗ ಎಂಬಂತೆ ಸಣ್ಣ ವಯಸ್ಸಿನಿಂದಲೂ ಸಾಕುತ್ತಿದ್ದರು ಜೋಸೆಫ್.
ಈ ನಡುವೆ ಬೆಳೆಯುತ್ತಾ ಬೆಳೆಯುತ್ತಾ ಆಯಂಟೊನಿ ಕುಡಿತದ ದಾಸನಾಗಿದ್ದ. ಕುಡಿಯಲು ದುಡ್ಡು ಕೇಳಿ ಆಗಾಗ ಜೋಸೆಫ್ ಜೊತೆ ಜಗಳವಾಡುತಿದ್ದ. ಮಂಗಳವಾರವೂ ರಾತ್ರಿ ಇದೇ ವಿಚಾರವಾಗಿ ಜಗಳ ನಡೆದಿತ್ತು. ಗಲಾಟೆ ವೇಳೆ ಆಯಂಟೊನಿ ದೊಣ್ಣೆಯಿಂದ ಜೋಸೆಫ್ ತಲೆಗೆ ಹೊಡೆದಿದ್ದ.
ಇದರಿಂದ ಗಂಭೀರವಾಗಿ ಗಾಯಗೊಂಡ ಜೋಸೆಫ್ ಅವರನ್ನು ಸ್ಥಳೀಯರು ಆತನ ಆಸ್ಪತ್ರೆಗೆ ಒಯ್ದಿದ್ದರು. ಆದರೆ, ಮಾರ್ಗ ಮಧ್ಯಯೇ ಜೋಸೆಫ್ ಮೃತಪಟ್ಟಿದ್ದ.
ಜೋಸೆಫ್ ಕೊಲೆಯಾಗಿರುವ ಬಗ್ಗೆ ಆಸ್ಪತ್ರೆಯಿಂದ ಪೊಲೀಸರಿಗೆ ಮಾಹಿತಿ ಬಂದಿದ್ದು, ಇದನ್ನು ಆಧರಿಸಿ ತನಿಖೆ ನಡೆಸಿದರು. ಈ ನಡುವೆ, ಕೊಲೆ ಮಾಡಿದ ಬಳಿಕ ಆಯಂಟೊನಿ ತಪ್ಪಿಸಿಕೊಂಡು ಪರಾರಿಯಾಗಿದ್ದ. ಆತನನ್ನು ಆರ್ ಟಿ ನಗರದಿಂದ ಬಂಧಿಸಲಾಯಿತು. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ನಗರದ ಎನ್‌ಟಿಐ ಲೇಔಟ್ ಜಂಕ್ಷನ್ ಇರುವ ಐದು ಮಹಡಿಗಳ ಕಟ್ಟಡದಿಂದ ಯುವಕನೊಬ್ಬ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಮಾರು ೨೦ ವರ್ಷದ ಯುವಕ ಸುಚೀರ್ ಮಾನಸಿಕ ಅಸ್ವಸ್ಥನೆಂದು ಹೇಳಲಾಗಿದೆ.
ಕೆಲವು ಸಮಯದಿಂದ ಅಮೆರಿಕದಿಂದ ಮರಳಿ ಬಂದಿದ್ದ ಸುಚೀರ್ ಸ್ವಲ್ಪ ಮಟ್ಟಿಗೆ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗಿದೆ. ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿದ್ದ ಈತ ಈ ಹಿಂದೆ ಹಲವು ಬಾರಿ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ.
ಈತನ ತಂದೆ ಅಮೆರಿಕದಲ್ಲಿ ವಾಸಿಸುತ್ತಿದ್ದು ಮಗನನ್ನು ವಿದ್ಯಾಭ್ಯಾಸಕ್ಕೆಂದು ಬೆಂಗಳೂರಿಗೆ ಬಂದಿದ್ದ. ಇವರ ಕುಟುಂಬ ಮೂಲತಃ ಆಂಧ್ರ ಪ್ರದೇಶದ್ದು ಎನ್ನಲಾಗಿದೆ.
ಸುಚೀರ್ ಶವವನ್ನು ಎಂ ಎಸ್ ರಾಮಯ್ಯಗೆ ರವಾನೆ ಮಾಡಲಾಗಿದ್ದು, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.