ಜಾಬ್ ಇಂಟರ್‌ವ್ಯೂಗೆ ಕರೆದು ಗುರುಗ್ರಾಮ ಮಾಲ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿರುವ ಸಹಾರಾ ಮಾಲ್‌ಗೆ ೨೭ ವರ್ಷದ ಮಹಿಳೆಯೊಬ್ಬರನ್ನು ಜಾಬ್ ಇಂಟರ್‌ವ್ಯೂಗೆ ಕರೆದು, ಮಾಲ್‌ನ ಪಾರ್ಕಿಂಗ್ ಸ್ಥಳದಲ್ಲಿಯೇ (Gurgaon Mall Incident) ಅವರ ಮೇಲೆ ಅತ್ಯಾಚಾರ ಎಸಗಲಾಗಿದೆ.
ಎಂಜಿನಿಯರಿಂಗ್ ಪದವಿ ಮುಗಿಸಿರುವ, ಗುರುಗ್ರಾಮದ ಡಿಎಲ್‌ಎಫ್ ನಿವಾಸಿಯಾದ ಮಹಿಳೆಯು ಆನ್‌ಲೈನ್ ಪೋರ್ಟಲ್‌ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದಾರೆ. ಇದಾದ ಬಳಿಕ ಮಹಿಳೆಗೆ ಒಬ್ಬ ವ್ಯಕ್ತಿಯ ಮೊಬೈಲ್ ನಂಬರ್ ಸಿಕ್ಕಿದ್ದು, ಆತನ ಜತೆ ಮಾತನಾಡಿದ್ದಾರೆ.
ತನ್ನ ಹೆಸರನ್ನು ತುಷಾರ್ ಶರ್ಮಾ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಯು, ಉದ್ಯೋಗ ಗ್ಯಾರಂಟಿ ಎಂಬ ಭರವಸೆ ನೀಡಿ, ಸಹಾರಾ ಮಾಲ್‌ನಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಿದ್ದಾನೆ. ಅದರಂತೆ ಮಾಲ್‌ಗೆ ತೆರಳಿದ ಮಹಿಳೆಯು ಅತ್ಯಾಚಾರಕ್ಕೀಡಾಗಿದ್ದಾರೆ.
ಮಹಿಳೆಯು ಸೆಕ್ಟರ್ ೫೧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. “ಉದ್ಯೋಗದ ಭರವಸೆ ನೀಡಿದ ವ್ಯಕ್ತಿಯು ಮಾಲ್‌ಗೆ ಬರುವಂತೆ ಸೂಚಿಸಿದೆ. ಮಾಲ್ ಹೊರಗೆ ಭೇಟಿಯಾದ ಆತ, ಪಾರ್ಕಿಂಗ್ ಏರಿಯಾಗೆ ಕರೆದೊಯ್ದು ನೀರು ಕೊಟ್ಟ. ಇದಾದ ಬಳಿಕ ನನಗೆ ಅಮಲೇರಿದಂತಾಯಿತು.
ಬಳಿಕ ನನ್ನನ್ನು ಕಾರಿನಲ್ಲಿ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದೆ. ನಂತರ ನನ್ನನ್ನು ಪಾರ್ಕಿಂಗ್ ಏರಿಯಾದಲ್ಲಿಯೇ ಬಿಟ್ಟು ಹೋದ” ಎಂಬುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.