ಕಾಫಿನಾಡಿನಲ್ಲಿ ದತ್ತಜಯಂತಿ ಸಂಭ್ರಮ

ಕಾಫಿನಾಡಿನಲ್ಲಿ ದತ್ತಜಯಂತಿ ಸಂಭ್ರಮ

ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೋ ಕಾಫಿನಾಡಿನ ದತ್ತಪೀಠದಲ್ಲಿ ಮೂರು ದಿನಗಳ ಕಾಲ ದತ್ತಜಯಂತಿ ಸಂಭ್ರಮ ಆರಂಭವಾಗಿದೆ. ಇಂದು ಅನಸೂಯ ಜಯಂತಿ, ನಾಳೆ ಶೋಭಾಯಾತ್ರೆ, ಗುರುವಾರ ದತ್ತಪಾದುಕೆ ದರ್ಶನ ನಡೆಯಲಿದೆ. ಹಾಗಾಗಿ, ಹಿಂದೂ ಸಂಘಟನೆಗಳು ನಗರವನ್ನ ಕೇಸರಿಮಯವನ್ನಾಗಿಸಿದ್ರೆ, 4,500ಕ್ಕೂ ಅಧಿಕ ಪೊಲೀಸರು ಜಿಲ್ಲೆಯಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ದತ್ತಜಯಂತಿ ಹಿನ್ನೆಲೆ ಡಿ. 9ರ ಬೆಳಿಗ್ಗೆ 10 ಗಂಟೆಯವರೆಗೆ ಮುಳ್ಳಯ್ಯನಗಿರಿ ಭಾಗದ ಎಲ್ಲಾ ಪ್ರವಾಸಿ ತಾಣಗಳಿಗೆ ನಿಷೇಧ ಹೇರಲಾಗಿದೆ.