ಐಕ್ಯತಾ ಯಾತ್ರೆಗೆ ಜಾತಿ, ಧರ್ಮ, ಪಕ್ಷಬೇಧ ಮರೆತು ಆಹ್ವಾನ : ಡಿಕೆಶಿ

ಐಕ್ಯತಾ ಯಾತ್ರೆಗೆ ಜಾತಿ, ಧರ್ಮ, ಪಕ್ಷಬೇಧ ಮರೆತು ಆಹ್ವಾನ : ಡಿಕೆಶಿ

ಮೈಸೂರು,ಸೆ.15- ರಾಜ್ಯ ಮತ್ತು ರಾಷ್ಟ್ರದ ಸಮಸ್ಯೆಗಳ ಚರ್ಚೆಗಾಗಿ ರಾಹುಲ್ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆ ನಡೆಸುತ್ತಿದ್ದು, ಇದರಲ್ಲಿ ಭಾಗವಹಿಸಲು ಜಾತಿ, ಧರ್ಮ, ಪಕ್ಷಬೇಧ ಮರೆತು ಪ್ರತಿಯೊಂದು ಮನೆಗೂ ಆಹ್ವಾನ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತಾವು ಹಲವು ಕಡೆ ಪ್ರವಾಸ ಕೈಗೊಂಡು ರಾಹುಲ್ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆ ಹಾದುಹೋಗುವ ಜಾಗ ಮತ್ತು ತಂಗುವ ಸ್ಥಳಗಳ ಪರಿಶೀಲನೆ ನಡೆಸಿದ್ದೇನೆ. ಕಾರ್ಯಕರ್ತರು, ಮುಖಂಡರ ಜೊತೆ ಸಮಾಲೋಚನೆ ಮಾಡಿ ಪ್ರತಿ ಪಂಚಾಯ್ತಿಯಲ್ಲೂ ಸಭೆಗಳನ್ನು ನಡೆಸಬೇಕು. ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದಲ್ಲಿ ತಯಾರಿಗಳಾಗಬೇಕು, ಬೇಧಬಾವವಿಲ್ಲದೆ ಎಲ್ಲರಿಗೂ ಆಹ್ವಾನ ನೀಡಬೇಕೆಂದು ಸೂಚಿಸಿರುವುದಾಗಿ ಹೇಳಿದರು. ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲು ಐಕ್ಯತಾ ಯಾತ್ರೆ ನಡೆಸಲಾಗುತ್ತಿದೆ. ಹೀಗಾಗಿ ಎಲ್ಲರೂ ಭಾಗವಹಿಸಬೇಕಿದೆ. ರಾಹುಲ್ ಗಾಂಧಿಯವರು ಯಾರ ಮನೆಯಲ್ಲೂ ತಂಗುವುದಿಲ್ಲ. ಮೂರು ಎಕರೆ ವಿಸ್ತೀರ್ಣ ಇರುವ ಸ್ಥಳಗಳಲ್ಲಿ ಬೀಡುಬಿಡಲಿದ್ದು, ತಮ್ಮ ವಾಹನಗಳಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದರು. 

ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಲು ಐಕ್ಯತಾ ಯಾತ್ರೆ ನಡೆಸಲಾಗುತ್ತಿದೆ. ಹೀಗಾಗಿ ಎಲ್ಲರೂ ಭಾಗವಹಿಸಬೇಕಿದೆ. ರಾಹುಲ್ ಗಾಂಧಿಯವರು ಯಾರ ಮನೆಯಲ್ಲೂ ತಂಗುವುದಿಲ್ಲ. ಮೂರು ಎಕರೆ ವಿಸ್ತೀರ್ಣ ಇರುವ ಸ್ಥಳಗಳಲ್ಲಿ ಬೀಡುಬಿಡಲಿದ್ದು, ತಮ್ಮ ವಾಹನಗಳಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎಂದರು.

ಸಂಜೆ ವೇಳೆ ಔಪಚಾರಿಕವಾಗಿ ಕೆಲಸಗಳು ನಡೆಯಲಿವೆ. ಮಧ್ಯಾಹ್ನ ಬಿಡುವಿನ ಸಮಯದಲ್ಲಿ ಯುವಕರು, ನಿರುದ್ಯೋಗಿಗಳು, ಮಹಿಳೆಯರು, ಪರಿಶಿಷ್ಟರು, ರೈತರು, ಸೋಲಿಗರು ಸೇರಿದಂತೆ ಇತರ ವರ್ಗಗಳ ಜನರ ಜೊತೆ ಸಂವಾದ ನಡೆಸಲಿದ್ದಾರೆ. ಸಮಯ ಸಿಕ್ಕರೆ ಸಮೀಪದ ಪ್ರತಿಷ್ಟಿತ ಸ್ಥಳಗಳಿಗೂ ಭೇಟಿ ನೀಡಲಿದ್ದಾರೆ ಎಂದು ವಿವರಿಸಿದರು.

ರಾಹುಲ್ ಗಾಂಧಿ ಅವರ ಐಕ್ಯತಾ ಯಾತ್ರೆಯಿಂದ ಕರ್ನಾಟಕ ಕಾಂಗ್ರೆಸ್‍ನ ಬಲ ಹೆಚ್ಚಾಗಲಿದೆ. 22 ದಿನ ರಾಷ್ಟ್ರೀಯ ನಾಯಕರು ನಮ್ಮ ರಾಜ್ಯದಲ್ಲಿ ಸಂಚರಿಸುವುದು ಸಹಜವಾಗಿ ಬಲ ಹೆಚ್ಚಿಸಲಿದೆ. ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸಿದ್ದೇವೆ. ರಾಹುಲ್ ಗಾಂಧಿ ಅವರು ಹಾದಿಮಧ್ಯೆ ಬದನಾಳು ಮತ್ತು ಆದಿಚುಂಚನಗಿರಿಯಲ್ಲಿ ತಂಗಲಿದ್ದಾರೆ ಎಂದರು.