ಏ.9ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ‌ 'ಮೋದಿ' ಭೇಟಿ : ಭದ್ರತೆಗಾಗಿ 2 ದಿನ 'ಪ್ರವಾಸಿಗರಿಗೆ ಸಫಾರಿ ನಿರ್ಬಂಧ

ಏ.9ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ‌ 'ಮೋದಿ' ಭೇಟಿ : ಭದ್ರತೆಗಾಗಿ 2 ದಿನ 'ಪ್ರವಾಸಿಗರಿಗೆ ಸಫಾರಿ ನಿರ್ಬಂಧ

ಚಾಮರಾಜನಗರ : ಏ.9ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಭೇಟಿ ನೀಡುವ ಹಿನ್ನಲೆ ಸಾರ್ವಜನಿಕರಿಗೆ 2 ದಿನಗಳ ಕಾಲ ಸಫಾರಿ ನಿರ್ಬಂಧ ಹೇರಲಾಗಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.

ಈ ನಿಟ್ಟಿನಲ್ಲಿ ಏಪ್ರಿಲ್ 8 ಮತ್ತು 9 ರಂದು ಭದ್ರತೆ ಕಾಪಾಡುವ ದೃಷ್ಟಿಯಿಂದ ಉದ್ಯಾನವನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂರ್ಧಿಸಲಾಗಿದೆ ಎಂದು ಬಂಡೀಪುರ ಉದ್ಯಾನವನ ಸಿಎಫ್‌ ರಮೇಶ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. ಇದೀಗ ಬಂದ ಸುದ್ದಿಯಾಗಿದ್ದು ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣ ಅಪ್‌ಡೇಟ್‌ ಮಾಡಲಾಗುತ್ತದೆ.