ಏರೋ ಇಂಡಿಯಾ ಏರ್ ಶೋ ವೀಕ್ಷಣೆಗೆ ತೆರಳುವವರಿಗೆ `BMTC'ಯಿಂದ ಗುಡ್ ನ್ಯೂಸ್

ಬೆಂಗಳೂರು: ಏರೋ ಇಂಡಿಯಾ-2023ಕ ಪ್ರದರ್ಶನ ಫೆ.13ರ ಇಂದಿನಿಂದ ಆರಂಭಗೊಳ್ಳಲಿದೆ. 14ನೇ ಆವೃತ್ತಿಯ ಏರೋ ಇಂಡಿಯಾ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ. ಇಂತಹ ಏರ್ ಶೋಗೆ ತೆರಳುವಂತ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸಂಚಾರದ ವ್ಯವಸ್ಥೆ ಮಾಡಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬಿಎಂಟಿಸಿಯು, ಬೆಂಗಳೂರಿನ ಯಲಹಂಕದಲ್ಲಿರುವ ಭಾರತೀಯ ವಾಯುನೆಲೆಯಲ್ಲಿ ದಿನಾಂಕ 13-02-2023 ರಿಂದ 17-02-2023 ರವರೆಗೆ ಏರೋ ಇಂಡಿಯಾ-2023 ಪ್ರದರ್ಶನ ವೀಕ್ಷಿಸಲು ಹೋಗುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂ.ಮ.ಸಾ.ಸಂಸ್ಥೆಯ ವತಿಯಿಂದ ವಿಶೇಷ ಸಾರಿಗೆ ಸೌಲಭ್ಯವನ್ನು ಒದಗಿಸಲು ಯೋಜಿಸಲಾಗಿದೆ ಎಂದಿದೆ.
ಸಾರ್ವಜನಿಕ ವೈಮಾನಿಕ ಪ್ರದರ್ಶನವು ಬೆಳಿಗ್ಗೆ 10:00 ಗಂಟೆ ಹಾಗೂ ಮಧ್ಯಾಹ್ನ 02:00 ಗಂಟೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ದಿನಾಂಕ 16-02-2023 ರಿಂದ 17-02-2023 ರವರೆಗೆ ಪ್ರಯಾಣಿಕರ ದಟ್ಟಣೆಗನುಗುಣವಾಗಿ ನಗರದ ವಿವಿಧ ಭಾಗಗಳಿಂದ ಪ್ರದರ್ಶನವು ನಡೆಯುವ ಸ್ಥಳಕ್ಕೆ ಹೆಚ್ಚುವರಿ ಬಸ್ಸುಗಳನ್ನು ಆಚರಣೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಈ ವಿಶೇಷ ಸೇವೆಗಳನ್ನು ಪ್ರಮುಖವಾಗಿ ಕೆಂಪೇಗೌಡ ಬಸ್ ನಿಲ್ದಾಣ, ಕೃ.ರಾ.ಮಾರುಕಟ್ಟೆ ಬಸ್ ನಿಲ್ದಾಣ, ಶಿವಾಜಿನಗರ ಬಸ್ ನಿಲ್ದಾಣ, ಹೆಬ್ಬಾಳ ರಿಂಗ್ ರಸ್ತೆ ಜಂಕ್ಷನ್, ಯಲಹಂಕ (ಎನ್.ಇ.ಎಸ್), ಬನಶಂಕರಿ ಟಿಟಿಎಂಸಿ, ಕೆಂಗೇರಿ, ಟಿನ್ಪ್ಯಾಕ್ಟರಿ ಹಾಗೂ ಯಶವಂತಪುರದಿಂದ ಆಚರಣೆ ಮಾಡಲಾಗುವುದು ಎಂದು ತಿಳಿಸಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಯಶವಂತಪುರ ಬಸ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಜಯನಗರ ಬಸ್ ನಿಲ್ದಾಣ, ಕೋರಮಂಗಲ ಬಸ್ ನಿಲ್ದಾಣ, ಕೆಂಗೇರಿ ಬಸ್ ನಿಲ್ದಾಣ ಮೊದಲಾದ ಕಡೆಗಳಲ್ಲಿ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಂಡು ತಮ್ಮ ಸ್ವಂತ/ ವೈಯಕ್ತಿಕ ವಾಹನಗಳನ್ನು ಮೇಲ್ಕಂಡ ಬಸ್ ನಿಲ್ದಾಣಗಳಲ್ಲಿ ನಿಲ್ಲಿಸಿ ಬೆಂ.ಮ.ಸಾ.ಸಂಸ್ಥೆಯ ಸೇವೆಗಳನ್ನು ಬಳಸಿಕೊಂಡು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವಂತೆ ಕೋರಿದೆ.
ಪ್ರಯಾಣಿಕರ ದಟ್ಟಣೆಗನುಗುಣವಾಗಿ ಹೆಚ್ಚುವರಿಯಾಗಿ ಆಚರಣೆ ಮಾಡುವ ಮಾರ್ಗಗಳ ವಿವರಗಳು ಕೆಳಕಂಡಂತಿವೆ