ರಣಭೀಕರ ಭೂಕಂಪನಕ್ಕೆ ಟರ್ಕಿ ತತ್ತರ : ಸಾವಿನ ಸಂಖ್ಯೆ 34 ಸಾವಿರಕ್ಕೆ ಏರಿಕೆ

ರಣಭೀಕರ ಭೂಕಂಪನಕ್ಕೆ ಟರ್ಕಿ ತತ್ತರ : ಸಾವಿನ ಸಂಖ್ಯೆ 34 ಸಾವಿರಕ್ಕೆ ಏರಿಕೆ

ರ್ಕಿ : ಭಾರೀ ಭೂಕಂಪನದಿಂದ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಈವರೆಗೆ ಭೂಕಂಪನದಿಂದ 34 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಭೂಕಂಪನದಿಂದ ಸಾವಿರಾರು ಕಟ್ಟಡಗಳು ನೆಲಸಮಗೊಳಿಂಡಿದ್ದು, ಕಳೆದ ಆರು ದಿನಗಳ ನಂತರ ಭಾನುವಾರ ರಕ್ಷಣಾ ಕಾರ್ಯಕರ್ತರು ಗರ್ಭಿಣಿ ಮಹಿಳೆ ಮತ್ತು ಇಬ್ಬರು ಸಣ್ಣ ಮಕ್ಕಳು ಸೇರಿದಂತೆ ಹೆಚ್ಚಿನ ಬದುಕುಳಿದವರನ್ನು ಹೊರತೆಗೆದಿದ್ದಾರೆ.

ರಕ್ಷಣಾ ಕಾರ್ಯದಲ್ಲಿ ತೊಡಗಿರುವ ರಕ್ಷಣಾ ಸಿಬ್ಬಂದಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವನ್ನ ವ್ಯಕ್ತಪಡಿಸಿದ್ದಾರೆ. ನೂರಾರು ಕುಟುಂಬಗಳು ಇನ್ನೂ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ ಎಂದು ರಕ್ಷಕರು ಹೇಳಿದ್ದಾರೆ. ಟರ್ಕಿಯ 10 ಪ್ರಾಂತ್ಯಗಳು ಹೆಚ್ಚು ಹಾನಿಗೊಳಗಾಗಿವೆ. ಇಲ್ಲಿ 10 ಸಾವಿರ ಕಟ್ಟಡಗಳು ಕುಸಿದಿವೆ. ಒಂದು ಲಕ್ಷ ಕಟ್ಟಡಗಳು ಹಾನಿಗೊಳಗಾಗಿವೆ.

ಟರ್ಕಿ ಮತ್ತು ಸಿರಿಯಾದ ಕೆಲವು ಭಾಗಗಳಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚುತ್ತಿರುವಂತೆಯೇ, ಟರ್ಕಿಯ ಅಧಿಕಾರಿಗಳು 'ಕಳಪೆ ಮತ್ತು ಅಕ್ರಮ' ನಿರ್ಮಾಣ ವಿಧಾನಗಳಲ್ಲಿ ಭಾಗಿಯಾಗಿರುವ 130 ಕ್ಕೂ ಹೆಚ್ಚು ಕಟ್ಟಡ ಗುತ್ತಿಗೆದಾರರನ್ನು ಗುರಿಯಾಗಿಸಿಕೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.8 ಮತ್ತು 7.5 ರಷ್ಟಿದ್ದ ಭೂಕಂಪಗಳಿಂದ ಸಾವನ್ನಪ್ಪಿದವರ ಸಂಖ್ಯೆ ಈಗ 34,000 ದಾಟಿದೆ. ರಕ್ಷಣಾ ಕಾರ್ಯಗಳು ಮುಂದುವರೆದಿದ್ದು, 90,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.