ಉದ್ಯೋಗಿಗಳಿಗೆ ಶಾಕ್ ನೀಡಿದ ಶವೋಮಿ

ಚೀನಾದ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ಶವೋಮಿ ಸಮಾರ್ಟ್ಫೋನ್ ತಯಾರಿಕಾ ಘಟಕ, ಇಂಟರ್ನೆಟ್ ಸೇವಾ ಘಟಕಗಳು & ಇತರ ವಿಭಾಗಳಿಂದ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಎಂದು ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ ವರದಿ ಮಾಡಿದೆ. ಕಂಪನಿಯ ಒಟ್ಟು ಉದ್ಯೋಗಿಗಳ ಸಂಖ್ಯೆಯ ಶೇ. 15ರಷ್ಟು ಮಂದಿಯನ್ನು ವಜಾಗೊಳಿಸಲಾಗುತ್ತಿದೆ. ಸೆ.30ರ ವರೆಗಿನ ದತ್ತಾಂಶದ ಪ್ರಕಾರ, ಕಂಪನಿಯಲ್ಲಿ ಒಟ್ಟಾರೆಯಾಗಿ 35,314 ಉದ್ಯೋಗಿಗಳಿದ್ದಾರೆ ಎಂದು ವರದಿ ತಿಳಿಸಿದೆ.