ಇಂದು ಮಧ್ಯಾಹ್ನ 3:30 ಕ್ಕೆ ಹುಬ್ಬಳ್ಳಿಗೆ 'ಪ್ರಧಾನಿ ಮೋದಿ' ಆಗಮನ

ಇಂದು ಮಧ್ಯಾಹ್ನ 3:30 ಕ್ಕೆ ಹುಬ್ಬಳ್ಳಿಗೆ 'ಪ್ರಧಾನಿ ಮೋದಿ' ಆಗಮನ

ಹುಬ್ಬಳ್ಳಿ: ಹುಬ್ಬಳ್ಳಿಗೆ ಇಂದು 'ಪ್ರಧಾನಿ ಮೋದಿ' ಆಗಮಿಸಲಿದ್ದು, 'ರಾಷ್ಟ್ರೀಯ ಯುವಜನೋತ್ಸ'ವಕ್ಕೆ ಚಾಲನೆ ನೀಡಲಿದ್ದಾರೆ.

ಇಂದು ಮಧ್ಯಾಹ್ನ 3:30 ಕ್ಕೆ ಪ್ರಧಾನಿ ಮೋದಿ ಹುಬ್ಬಳ್ಳಿ ಏರ್ ಪೋರ್ಟ್ ಗೆ ಬಂದಿಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆ ಏರ್ ಪೋರ್ಟ್ ಸುತ್ತಾಮುತ್ತಾ ಬಿಗಿ ಭದ್ರತೆ ಒದಗಿಸಲಾಗಿದೆ.

ಇಂದಿನಿಂದ ಹುಬ್ಬಳ್ಳಿಯಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಏರಪೋರ್ಟ್ ನಿಂದ ರೈಲ್ವೆ ಮೈದಾನದವರೆಗೆ 8 ಕಿಲೋ ಮೀಟರ್ ಪ್ರಧಾನಿ ಮೋದಿ ವಾಹನದಲ್ಲಿ ತೆರಳಲಿದ್ದಾರೆ.

ರಾಷ್ಟ್ರೀಯ ಯುವಜನೋತ್ಸಕ್ಕೆ ಚಾಲನೆ ಹಿನ್ನೆಲೆ ಇಂದು ಒಂದು ದಿನ ಹುಬ್ಬಳ್ಳಿ ನಗರದ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಪ್ರಧಾನಮಂತ್ರಿಗಳು ಆಗಮನದ ಹಿನ್ನೆಲೆ, ಸಾರಿಗೆ ಬಸ್ಗಳ ಓಡಾಟಕ್ಕೆ ಅನಾನುಕೂಲವಾಗುತ್ತದೆ. ಇದರಿಂದ ಗ್ರಾಮೀಣ ಭಾಗದಿಂದ ಬರುವ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಡಚಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಒಂದು ದಿನದ ರಜೆ ಘೋಷಿಸಲಾಗಿದೆ.

ಹುಬ್ಬಳ್ಳಿಯ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ಮೋದಿ ಜತೆ ವೇದಿಕೆ ಹಂಚಿಕೊಳ್ಳಲು 21 ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ.ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಅನುರಾಗ್ ಠಾಕೂರ್, ನಿಶಿತ್ ಪ್ರಮಾಣಿಕ್, , ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ್, ಸಿ.ಎಂ.ನಿಂಬಣ್ಣವರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಕೆ.ಸಿ.ನಾರಾಯಣಗೌಡ, ಹಾಲಪ್ಪ ಆಚಾರ್, ಶಂಕರ್ ಪಾಟೀಲ್ ಮುನೇನಕೊಪ್ಪ. ಅಬ್ಬಯ್ಯ ಪ್ರಸಾದ್, ಅಮೃತ್ ದೇಸಾಯಿ, ಕುಸುಮಾ ಶಿವಳ್ಳಿ, MLC ಎಸ್.ವಿ.ಸಂಕನೂರ್, ಹು-ಧಾ ಪಾಲಿಕೆ ಮೇಯರ್ ಈರೇಶ್ ಅಂಚಟಗೇರಿ, ಜಂಗಲ್ ಲಾಡ್ಜಸ್ ರೆಸಾರ್ಟ್ಸ್ ಅಧ್ಯಕ್ಷ ರಾಜೇಶ್ ಕೋಟೆನ್ನವರ್, ಪ್ರದೀಪ್ ಶೆಟ್ಟರ್, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಈ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, 2900 ಪೊಲೀಸರ ನಿಯೋಜನೆ ಮಾಡಲಾಗಿದೆ. 7 ಎಸ್ಪಿ, 25 ಡಿವೈಎಸ್ಫಿ, 60 ಇನ್ ಸ್ಪೆಕ್ಟರ್, 18 ಕೆಎಸ್ ಆರ್ ಪಿ ಸೇರಿ ಒಟ್ಟು 2900 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ರೈಲ್ವೇ ಮೈದಾನದ ಸುತ್ತಾಮುತ್ತಾ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ನಿಯೋಜನೆಯಾಗಿರುವ ಪೊಲೀಸ್ ಸಿಬ್ಬಂದಿ ಸ್ಥಳದಿಂದ ಕದಲದಂತೆ ತಾಕೀತು ಮಾಡಿದ್ದಾರೆ.