ಆಡಿಯೋ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ವಿದ್ಯಾಭರಣ್

ವೈಷ್ಣವಿ ಜತೆ ಮದುವೆ ಮಾತುಕತೆ ಬೆನ್ನಲ್ಲೇ ತನ್ನ ವಿರುದ್ಧ ಕೇಳಿಬಂದಿದ್ದ ಆರೋಪದ ಕುರಿತು ವಿದ್ಯಾಭರಣ್ ಸ್ಪಷ್ಟನೆ ನೀಡಿದ್ದಾರೆ. "ಈ ಹಿಂದೆ ನನಗೆ ಪ್ರೇಯಸಿ ಇದ್ದಿದ್ದು ನಿಜ. ನಾನು ಯಾವುದೇ ಹುಡುಗಿ ಜತೆ ತಪ್ಪಾಗಿ ನಡೆದುಕೊಂಡಿಲ್ಲ. ಆಡಿಯೋದಲ್ಲಿ ಮಾತನಾಡಿರುವ ಯುವತಿ, ನೇರವಾಗಿಯೇ ಆರೋಪ ಮಾಡಬಹುದಿತ್ತು ಅಥವಾ ದೂರು ಕೊಡಬಹುದಿತ್ತು. ಇದು ನನ್ನ ಕುಟುಂಬದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ' ಎಂದು ವಿದ್ಯಾಭರಣ್ ಹೇಳಿದ್ದಾರೆ