ಅ.23 ರಂದು ಅಯೋಧ್ಯೆಯ ದೀಪೋತ್ಸವದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ

ಅ.23 ರಂದು ಅಯೋಧ್ಯೆಯ ದೀಪೋತ್ಸವದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ

ಕ್ನೋ, ಅಕ್ಟೋಬರ್ 18: ಉತ್ತರಪ್ರದೇಶದಲ್ಲಿ ಪ್ರತೀ ಬಾರಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಈ ಬಾರಿಯೂ ದೀಪಾವಳಿ ಆಚರಣೆಗೆ ಅಯೋಧ್ಯೆದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಅಕ್ಟೋಬರ್ 23) ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಿದ್ದಾರೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ದಿನ ರಾವಣನ ಮೇಲೆ ರಾಮನ ವಿಜಯವನ್ನು ಸೂಚಿಸುತ್ತದೆ. ಇದಲ್ಲದೆ ರಾಮ ತನ್ನ ಪತ್ನಿ ಸೀತಾ ಮತ್ತು ಸಹೋದರ ಲಕ್ಷ್ಮಣನೊಂದಿಗೆ 14 ವರ್ಷಗಳ ಕಾಲ ವನವಾಸದಲ್ಲಿದ್ದು ನಂತರ ಅಯೋಧ್ಯೆಗೆ ಹಿಂದಿರುಗಿದ ಸಂಕೇತವಾಗಿದೆ. ಆದ್ದರಿಂದ ಜನರು ಈ ದಿನವನ್ನು ಅಗಾಧ ಉತ್ಸಾಹದಿಂದ ಆಚರಿಸುತ್ತಾರೆ. ಈ ದಿನ ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಆಚರಿಸಲಾಗುತ್ತದೆ.

ಪ್ರಧಾನಿಯವರ ಪವಿತ್ರ ನಗರ ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಈ ಬಾರಿ ಅಯೋಧ್ಯೆಯ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಅವರು ಹಲವಾರು ಭಕ್ತರೊಂದಿಗೆ ದೀಪಾವಳಿಯನ್ನು ಆಚರಿಸಲಿದ್ದಾರೆ. ಭಾನುವಾರ ಪ್ರಧಾನಿ ಮೋದಿಯವರ ಅಯೋಧ್ಯೆ ಭೇಟಿಯ ಟೈಮ್‌ಲೈನ್ ಇಲ್ಲಿದೆ-


ಪಿಎಂ ಅಯೋಧ್ಯೆ ಭೇಟಿಯ ಟೈಮ್‌ಲೈನ್ ಇಲ್ಲಿದೆ-

ಸಂಜೆ 5 ಗಂಟೆಗೆ: ಪ್ರಧಾನಿ ಮೋದಿ ಅವರು ರಾಮ್ ಲಾಲಾ, ಶ್ರೀ ರಾಮಜನ್ಮ ಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ರಾಮಜನ್ಮ ಭೂಮಿ ತೀರ್ಥ ಕ್ಷೇತ್ರದ ಪ್ರವಾಸಿ ತಾಣವನ್ನು ವೀಕ್ಷಿಸುತ್ತಾರೆ.

ಸಂಜೆ 5.40ಕ್ಕೆ: ಶ್ರೀರಾಮನ 'ರಾಜ್ಯಾಭಿಷೇಕ' ವೀಕ್ಷಿಸಲು ಪ್ರಧಾನಮಂತ್ರಿ ಶ್ರೀರಾಮ ಕಥಾ ಪಾರ್ಕ್‌ನಲ್ಲಿ ಉಪಸ್ಥಿತರಿರುವರು.

6.30 PM: ಸರಯೂ ಘಾಟ್‌ನಲ್ಲಿ 'ಆರತಿ'ಯಲ್ಲಿ ಭಾಗವಹಿಸುವರು

6.40 PM: ರಾಮ್ ಕಿ ಪೌಡಿ ಘಾಟ್‌ಗಳಲ್ಲಿ 'ದೀಪೋತ್ಸವ'ದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ

7.30 PM: ಡಿಜಿಟಲ್ ಪಟಾಕಿಗಳ ಒಂದು ನೋಟವನ್ನು ವೀಕ್ಷಿಸಲಿದ್ದಾರೆ.

ಬಳಿಕ ರಾಮ್ ಕಿ ಪೈಡಿ ಘಾಟ್‌ಗಳಲ್ಲಿ ಆರನೇ 'ದೀಪೋತ್ಸವ' ಆಚರಿಸಲು ಸಿದ್ಧತೆಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.

ವಿಶ್ವದಾಖಲೆ ಬರೆದ ದೀಪೋತ್ಸವ

ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಯೋಗಿ ಸರ್ಕಾರ ಬೃಹತ್ 'ದೀಪೋತ್ಸವ' ಆಚರಣೆಗಳನ್ನು ಆಯೋಜಿಸಲಾಗುತ್ತಿದೆ. 2021 ರಲ್ಲಿ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ 9 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು (ದಿಯಾಗಳು) ಬೆಳಗಿಸಿದ ನಂತರ ವಿಶ್ವದಾಖಲೆಯನ್ನು ನಿರ್ಮಿಸಿತು. ಇದಕ್ಕೂ ಮೊದಲು 2020ರಲ್ಲಿ 5.84 ಲಕ್ಷ ದೀಪಗಳನ್ನು ಬೆಳಗಿಸಿ ದಾಖಲೆ ಸೃಷ್ಟಿಸಲಾಗಿತ್ತು.

ಯೋಗಿ ಸರ್ಕಾರ ಬೃಹತ್ 'ದೀಪೋತ್ಸವ'

ಬೆಳಕಿನ ಹಬ್ಬ ದೀಪಾವಳಿ ಈ ಬಾರಿ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ವಿಶೇಷವಾಗಿರಲಿದ್ದು, ಹೊಸ ದಾಖಲೆಯೊಂದನ್ನು ಸೃಷ್ಟಿ ಮಾಡಲಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಮತ್ತಷ್ಟು ಅದ್ಧೂರಿಯಾಗಿ ಆಚರಿಸುವ ಲೆಕ್ಕಚಾರದಲ್ಲಿರುವ ಉತ್ತರ ಪ್ರದೇಶ ಸರ್ಕಾರದ ಗಿನ್ನಿಸ್ ದಾಖಲೆ ಬರೆಯಲು ಮುಂದಾಗಿದೆ. ಈ ಬಾರಿ ಅಯೋಧ್ಯೆಯಲ್ಲಿ ನಡೆಯುತ್ತಿರುವ ದೀಪಾವಳಿ ವಿಶೇಷವಾಗಿರಲಿದ್ದು, 15 ಲಕ್ಷ ದೀಪಗಳನ್ನು ಬೆಳಗುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಲು ತಯಾರಿ ನಡೆದಿದೆ.

ಈಗಾಗಲೇ ಅಯೋಧ್ಯೆಯ ಕೇಂದ್ರ ಬಿಂದು ರಾಮ್ ಪೌಡಿಯಲ್ಲಿ ಮತ್ತು ರಾಮ ಜನ್ಮಭೂಮಿ ಸಂಕೀರ್ಣ ಸೇರಿ ನಗರದ ಬೇರೆ ಬೇರೆ ಭಾಗದಲ್ಲಿ 15 ಲಕ್ಷ ದೀಪಗಳನ್ನು ಬೆಳಗಳು ತಯಾರಿ ನಡೆದಿವೆ. ಇದು ಹೊಸ ದಾಖಲೆಯಾಗಲಿದೆ. ಈ ವರ್ಷ ಶ್ರೀರಾಮನ ನಾಡಿನಲ್ಲಿ ದಾಖಲೆಯ 15 ಲಕ್ಷ ದೀಪಗಳು ಬೆಳಗಲಿವೆ.

ದೀಪಗಳ ಎಣಿಕೆ

ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ ತಂಡ ಅಯೋಧ್ಯೆಯ ತಲುಪಿದ್ದು, ಹಣತೆಗಳ ಎಣಿಕೆ ಶುರು ಮಾಡಿದೆ. ದೀಪಾವಳಿಗೆ ಈ ಎಲ್ಲ ದೀಪಗಳು ಬೆಳಗಲಿದ್ದು, ಬಳಿಕ ಅಯೋಧ್ಯೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಲಿದೆ. ಈ ಹಿಂದೆ 2017 ರಲ್ಲಿ 1,80,000, 2018 ರಲ್ಲಿ 3,01,152, 2019 ರಲ್ಲಿ 5,50,000, 2020 ರಲ್ಲಿ 5,51000 ದೀಪಗಳನ್ನು ಬೆಳಗಲಾಗಿತ್ತು.

2017 ರಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಅಯೋಧ್ಯೆಯಲ್ಲಿ ದೊಡ್ಡ ಮಟ್ಟದ ದೀಪೋತ್ಸವ ಕಾರ್ಯಕ್ರಮ ಆರಂಭಿಸಿದ್ದರು. ಸದ್ಯ ಮತ್ತೆ ಯೋಗಿ ಸರ್ಕಾರ ಅಧಿಕಾರಕ್ಕೆ ಬಂದಿರುವ ಹಿನ್ನಲೆ ಅದ್ಧೂರಿಯಾಗಿ ಆಚರಿಸುವುದು ಮಾತ್ರವಲ್ಲದೇ ಹೊಸ ದಾಖಲೆ ಬರೆಯಲು ನಿರ್ಧರಿಸಿದೆ.