ಅಬ್ಬಬ್ಬಾ ಬೈಕ್ ಕದಿಯೋಕೆ ಫ್ಲೈಟ್ ನಲ್ಲಿ ಬರ್ತಿದ್ದ ಆತ ಸಾಮಾನ್ಯನಲ್ಲ ನಟ ಅಂತೆ..!

ಅಬ್ಬಬ್ಬಾ ಬೈಕ್ ಕದಿಯೋಕೆ ಫ್ಲೈಟ್ ನಲ್ಲಿ ಬರ್ತಿದ್ದ ಆತ ಸಾಮಾನ್ಯನಲ್ಲ ನಟ ಅಂತೆ..!

ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ ಬಂಧಿಸಿದ ಬಳಿಕ ಅವರ ವಿಚಾರಣೆ ನಡೆಸಿದ ಪೊಲೀಸರಿಗೆ ಕೆಲವೊಮ್ಮೆ ಶಾಕ್ ಆಗುತ್ತೆ. ಏನೆಲ್ಲಾ ಶೋಕಿಗಳಿಗೆ ಅವರು ಕಳ್ಳತನ ಮಾಡ್ತಾರೆ ಅನ್ನೋದನ್ನ ಕೇಳಿದ್ರೆ ಶಾಕ್ ಆಗುವಂತಿರುತ್ತೆ. ಇದೀಗ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಅಂತರಾಜ್ಯ ಬೈಕ್ ಕಳ್ಳರನ್ನ ಬಂಧಿಸಿದ್ದು, ಆತನ ವಿಚಿತ್ರ ರೀಸನ್ ಕೇಳಿ ಶಾಕ್ ಆಗಿದ್ದಾರೆ.

ಬಂಧಿತ ಆರೋಪಿ ವಿಕಾಸ್ ಕುಮಾರ್ ಗೆ ಆಯಕ್ಟಿಂಗ್ ಹುಚ್ಚು‌ ಇತ್ತಂತೆ. ಹೀಗಾಗಿ ಆತ ಬೈಕ್ ಕದಿಯೋಕೆ ಫ್ಲೈಟ್ ನಲ್ಲಿ ಬೆಂಗಳೂರಿಗೆ ಬರ್ತಿದ್ದನಂತೆ. ಇಲ್ಲಿ ಬೈಕ್ ಗಳನ್ನ ಕದ್ದ ವಿಕಾಸ್ ಆ ಬೈಕ್ ನಲ್ಲಿ ಆಲ್ಬಂ ಸಾಂಗ್ ಮಾಡ್ತಿದ್ದನಂತೆ.

ತನ್ನ ಸಹಚರರ ಜೊತೆ ಫ್ಲೈಟ್ ನಲ್ಲಿ ಬಂದು ಬೈಕ್ ಕಳ್ಳತನ ಮಾಡಿ, ನಂತರ ಅವುಗಳನ್ನ ಕದ್ದು ರಾಜಸ್ಥಾನಕ್ಕೆ ಹೋಗಿ ಮಾರಾಟ ಮಾಡ್ತಿದ್ದ. ಈ ಕೃತ್ಯಕ್ಕೆ ಟೈಲ್ಸ್ ವರ್ಕ್ ಮಾಡ್ತಿದ್ದ ಮತ್ತಿಬ್ಬರು ಆರೋಪಿಗಳನ್ನ ಬಳಸಿಕೊಳ್ತಿದ್ದನಂತೆ.‌ ಜೊತೆಗಾರರನ್ನ ನನ್ನ ಜೊತೆ ಬಂದ್ರೆ ಒಳ್ಳೆ ಹಣ ಮಾಡಬಹುದು ಅಂತೇಳಿ ಕರೆಸಿಕೊಳ್ಳುತ್ತಿದ್ದನಂತೆ.

ಸ್ನೇಹಿತರೆಲ್ಲಾ ಸೇರಿ ಹೈ ಫೈ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಾ ಇದ್ರಂತೆ. ಫೇಕ್ ಡಾಕ್ಯುಮೆಂಟ್ಸ್ ಕ್ರಿಯೇಟ್ ಮಾಡಿ, ಓಎಲ್‌ಎಕ್ಸ್ ನಲ್ಲಿ ಮಾರಾಟ ಮಾಡ್ತಾ ಇದ್ರಂತೆ. ಇನ್ಸ್ಟಾಗ್ರಾಮ್ ನಲ್ಲಿ ಈತನ ರೀಲ್ಸ್ ತುಂಬಾ ಫೇಮಸ್ ಆಗಿದೆ. ಅಷ್ಟೇ ಅಲ್ಲ ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಮೋಟಿವೇಷನ್ ವೀಡಿಯೋಗಳನ್ನೂ ಮಾಡಿದ್ದ. ಅದರಿಂದ ಬಂದ ಹಣದಿಂದ ಯೂಟ್ಯೂಬ್ ಚಾನೆಲ್ ಕೂಡ ಮಾಡಿದ್ನಂತೆ. ಆಯಕ್ಟಿಂಗ್ ಹುಚ್ಚಿಗೆ ಬೈಕ್ ಕಳ್ಳತನ‌ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದಾನೆ.