'ಒಂದು ಕರೆ ಮಾಡಬೇಕು' ಅನ್ನೋರಿಗೆ ನಿಮ್ಮ ಫೋನ್ ಕೊಡ್ತೀರಾ! ನಿಮ್ಮ ಅಕೌಂಟ್ ಆಗುತ್ತೆ ಖಾಲಿ!

'ಒಂದು ಕರೆ ಮಾಡಬೇಕು' ಅನ್ನೋರಿಗೆ ನಿಮ್ಮ ಫೋನ್ ಕೊಡ್ತೀರಾ! ನಿಮ್ಮ ಅಕೌಂಟ್ ಆಗುತ್ತೆ ಖಾಲಿ!

ಗಾಗಲೇ ನಿಮಗೆ ತಿಳಿದಿರುವಂತೆ ದೇಶದಲ್ಲಿ ಹೊಸ ಹಗರಣವೊಂದು ಹುಟ್ಟಿಕೊಳ್ಳುತ್ತಿರುವುದು ನಮಗೆಲ್ಲ ಗೊತ್ತಿದೆ. ಈ ನಡುವೆ ಮತ್ತೊಂದು ಹೊಸ ಹಗರಣ ಬೆಳಕಿಗೆ ಬಂದಿದೆ. ಹೆಚ್ಚಾಗಿ "ನಾನೊಂದು ತುರ್ತು ಕರೆ ಮಾಡಬೇಕಾಗಿದೆ ನಿಮ್ಮ ಫೋನ್ ಬಳಸಬವುದೆ? ಎಂದು ಕೇಳಿ ಫೋನ್ಗಳನ್ನು ಪಡೆಯಲಾಗುತ್ತಿದೆ.

ಒಂದು ವೇಳೆ ಇಂತಹ ಸಂಧರ್ಭಗಳಲ್ಲಿ ನಿಮ್ಮ ಫೋನ್ ಅನ್ನು ನೀವು ನೀಡಿದರೆ ನಿಮ್ಮ ಖಾತೆಯು ಖಾಲಿಯಾಗುವುದು ಖಚಿತ. ಏಕೆಂದರೆ ನಿಮ್ಮ ಫೋನಿಂದ ಒಂದೇ ಸಂಖ್ಯೆಯನ್ನು ಡಯಲ್ ಮಾಡಿ ಖಾಲಿ ಮಾಡುತ್ತಾರೆ. ಹಾಗಾಗಿ ಇಂತಹ ಮೋಸಗಾರರ ಬಗ್ಗೆ ಎಚ್ಚರದಿಂದಿರಿ. ಹೀಗಿರಲು ಈ ಹೊಸ ಕರೆ ಹಗರಣದ ಬಗ್ಗೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದನ್ನು ಹೇಗೆ ಗುರುತಿಸುವುದು ಎಂಬುದನ್ನು ನೀವು ಮುಂದೆ ತಿಳಿಯಿರಿ.

ನಿಮಗೆ ತಿಳಿಯದೆ ನಿಮ್ಮ ನಕಲಿ ಸಿಮ್ ಪಡೆಯುತ್ತಿದ್ದಾರೆ

ನಿಮ್ಮ ಸಿಮ್ ಅನ್ನು ಬದಲಾಯಿಸಲಾಗಿದೆ ಎಂಬುದರ ಮೊದಲ ಚಿಹ್ನೆಯು ಸಾಮಾನ್ಯವಾಗಿ ನೀವು ಸ್ವೀಕರಿಸುತ್ತಿರುವ ಕರೆಗಳು ಮತ್ತು SMS ಗಳ ಸಂಖ್ಯೆಯಲ್ಲಿ ತೀವ್ರವಾದ ಬದಲಾವಣೆಯಾಗಿದೆ ಅಥವಾ ನಿಮ್ಮ ಸಹೋದ್ಯೋಗಿಗಳು ಅಥವಾ ಸ್ನೇಹಿತರು ನಿಯಮಿತವಾಗಿ ಅವರು ನಿಮಗೆ ಕರೆ ಮಾಡಲು ಪ್ರಯತ್ನಿಸಿದರು ಆದರೆ ಅದನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಕೆಲವೊಮ್ಮೆ ನಿಮ್ಮ ಸಂಖ್ಯೆಯನ್ನು ಹೊಸ ಸಿಮ್ಗೆ ನಿಯೋಜಿಸಿದಾಗ ಸಂದೇಶ ಕಳುಹಿಸುವುದು ಮತ್ತು ಕರೆ ಮಾಡುವುದು ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸಬಹುದು.