ಅಂಕಪಟ್ಟಿ ಮುದ್ರಣ ಲೋಪದೋಷ ಸರಿಪಡಿಸುವಂತೆ ಧಾರವಾಡ ವಿವಿ ಪರೀಕ್ಷಾಂಗ ಕುಲಸಚಿವರಿಗೆ ಮನವಿ

ಅಂಕಪಟ್ಟಿ ಮುದ್ರಣ ಲೋಪದೋಷ ಸರಿಪಡಿಸುವಂತೆ ಧಾರವಾಡ ವಿವಿ ಪರೀಕ್ಷಾಂಗ ಕುಲಸಚಿವರಿಗೆ ಮನವಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಧಾರವಾಡ ವತಿಯಿಂದ , ಧಾರವಾಡ ವಿ.ವಿ ವಿತರಿಸಿರುವ ಅಂಕಪಟ್ಟಿಯ ಮುದ್ರಣದಲ್ಲಿ ಆಗಿರುವ ಲೋಪದೋಷಗಳನ್ನು ಈ ಕೂಡಲೇ ಬಗೆಹರಿಸಿ , ಮರು ಮುದ್ರಣ ಮಾಡಿ ಅಂಕಪಟ್ಟಿ ವಿತರಿಸಬೇಕು ಹಾಗೂ 10 ದಿನಗಳ ಒಳಗಾಗಿ NEP ವಿದ್ಯಾರ್ಥಿಗಳ 1 ಮತ್ತು 2 ನೇ ಸೆಮಿಸ್ಟರ್ ಫಲಿತಾಂಶವನ್ನು ನೀಡಬೇಕು ಎಂದು ಆಗ್ರಹಿಸಿ ಮನವಿಯನ್ನು ಪರೀಕ್ಷಾಂಗ ಕುಲಸಚಿವರಿಗೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಹಾಗೂ ಅರುಣ ಅಮರಗೋಳ ವಿದ್ಯಾನಂದ ಸ್ಥಾವರಮಠ, ಉಲ್ಲಾಸ ಗೋಡಿ, ವೆಂಕಟೇಶ್ ಲಮಾಣಿ ಇನ್ನಿತರರು ಉಪಸ್ಥಿತರಿದ್ದರು