ಹೊಸ ಎರಡು ಅಂತರರಾಷ್ಟ್ರೀಯ ದಾಖಲೆ ಪಡೆದ ಅತ್ಯಂತ 'ಕಿರಿಯ ಕವಿಯತ್ರಿ ಅಮನ ಜೆ ಕುಮಾರ್'

ಹೊಸ ಎರಡು ಅಂತರರಾಷ್ಟ್ರೀಯ ದಾಖಲೆ ಪಡೆದ ಅತ್ಯಂತ 'ಕಿರಿಯ ಕವಿಯತ್ರಿ ಅಮನ ಜೆ ಕುಮಾರ್'

ಬೆಂಗಳೂರು: ಈಗಾಗಲೇ ಹಲವು ದಾಖಲೆಗಳನ್ನು ತನ್ನ ಸಾಹಿತ್ಯ ಕೃಷಿಯ ಮೂಲಕ ದಾಖಲಿಸಿದ್ದಂತ ಅತ್ಯಂತ ಕಿರಿಯ ಕವಿಯತ್ರಿ ಅಮನ ಜೆ ಕುಮಾರ್, ಇದೀಗ ಮತ್ತೆ ಎರಡು ಅಂತರರಾಷ್ಟ್ರೀಯ ದಾಖಲೆಗಳನ್ನು ಮಾಡಿದ್ದಾರೆ.

ಹೌದು ಅಮನ ಜೆ.ಕುಮಾರ್ , ಡಾ.ಲತಾ ಟಿ.ಎಸ್ ಮತ್ತು ಜೈವಂತ್ ಕುಮಾರ್ ರವರ ಮಗಳು, ಹೊಸದಾಗಿ ಎರಡು ಅಂತರರಾಷ್ಟ್ರೀಯ ದಾಖಲೆಗೆ ಸೇರ್ಪಡೆಯಾಗಿದ್ದಾಳೆ.

'ಅಂತರರಾಷ್ಟ್ರೀಯ ವಿಶ್ವ ದಾಖಲೆ'ಯಲ್ಲಿ 'ಅತ್ಯಂತ ಕಿರಿಯ ಕವಿಯತ್ರಿ' ಹಾಗೂ 'ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್' ನಲ್ಲಿ 'ಕಿರಿಯ ಲೇಖಕಿ' ಎಂದು 14 ವರ್ಷ, 6 ತಿಂಗಳು ಹಾಗೂ 6 ದಿನ ವಯಸ್ಸಿನಲ್ಲಿ 'ಮೂರು ಪುಸ್ತಕಗಳನ್ನು ಮೂರು ಸತತ ವರ್ಷಗಳಲ್ಲಿ ಎರಡು ವಿವಿಧ ಭಾಷೆಗಳಲ್ಲಿ ಬರೆದಿರುವ ಕಿರಿಯ ಕವಿಯತ್ರಿ ಎಂದು ಗುರುತಿಸಲ್ಪಟ್ಟಿದ್ದಾಳೆ.

ಅಮನ ಪ್ರಸ್ತುತ ಬಿಷಪ್ ಕಾಟನ್ ಗರ್ಲ್ಸ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದು, ಈಗಾಗಲೇ ಐದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಹೊಂದಿದ್ದಾಳೆ. ಈಕೆಯು ಆಂಗ್ಲ ಭಾಷೆಯಲ್ಲಿ ಎರಡು ಪುಸ್ತಕಗಳನ್ನು ಹಾಗೂ ಒಂದನ್ನು ಹಿಂದಿಯಲ್ಲಿ ಬರೆದಿದ್ದು, ಇವಳ ನಾಲ್ಕನೇ ಪುಸ್ತಕ ಆಂಗ್ಲ ಭಾಷೆಯಲ್ಲಿ ಪ್ರಕಟವಾಗಲು ಸಿದ್ದವಾಗುತ್ತಿದೆ.

ಅಮನ ಹಾವರ್ಡ್ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಪೀಸಸ್ ಆಫ್ ವರ್ಲ್ಡ್ ಲಿಟರೇಚರ್ ಎಂಬ ತನ್ನ ಚೊಚ್ಚಲ ಸಾಹಿತ್ಯ ಕೋರ್ಸ್ ಅನ್ನು ಈಗಾಗಲೇ ಮುಗಿಸಿರುತ್ತಾಳೆ.