ಹೈದರಾಬಾದ್: ನಿಜ ಜೀವನದಲ್ಲಿ ಹೀರೋ ಆದ ಟಾಲಿವುಡ್ ನಟ ನಾಗ ಶೌರ್ಯ

ಹೈದರಾಬಾದ್: ಟಾಲಿವುಡ್ ನಟ ನಾಗ ಶೌರ್ಯ ಸಾರ್ವಜನಿಕವಾಗಿ ಕಪಾಳಮೋಕ್ಷಕ್ಕೊಳಗಾದ ಹುಡುಗಿಯ ರಕ್ಷಣೆಗೆ ಮುಂದಾಗುವ ಮೂಲಕ ನಿಜ ಜೀವನದ ಹೀರೋ ಆಗಿ ಮಾರ್ಪಟ್ಟಿದ್ದಾರೆ.
ತಮ್ಮ ಚಲನಚಿತ್ರಗಳಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಟ, ಹೈದರಾಬಾದ್ ಜನನಿಬಿಡ ರಸ್ತೆಯ ಮಧ್ಯದಲ್ಲಿ ತನ್ನ ಗೆಳತಿಯೊಂದಿಗೆ ನಿಂದನಾತ್ಮಕ ವಾಗಿ ವರ್ತಿಸುತ್ತಿದ್ದಾಗ ನಿಜ ಜೀವನದ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ.
ನಟನ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ, ಅದರಲ್ಲಿ ನಾಗ ಶೌರ್ಯ ಆತನ ಗೆಳತಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ವ್ಯಕ್ತಿಗೆ ಪದೇ ಪದೇ ಹೇಳುತ್ತಿರುವುದು ಕಂಡುಬರುತ್ತದೆ.
ಕಾರಿನಲ್ಲಿ ಹೋಗುತ್ತಿದ್ದ ನಾಗ ಶೌರ್ಯ, ರಸ್ತೆ ಮಧ್ಯದಲ್ಲಿ ವ್ಯಕ್ತಿಯೊಬ್ಬ ಯುವತಿಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ಗಮನಿಸಿ, ನಿಲ್ಲಿಸಿ ಆ ವ್ಯಕ್ತಿಯ ಬಳಿ ಹೋಗಿ ಕ್ಷಮೆಯಾಚಿಸುವಂತೆ ಕೇಳಿದ್ದಾನೆ. "ಅವಳು ನನ್ನ ಪ್ರೇಮಿ" ಎಂದು ಆ ವ್ಯಕ್ತಿ ಹೇಳುತ್ತಿದ್ದಂತೆ, ನಾಗ ಶೌರ್ಯ ಹೇಳಿದರು: "ಅವಳು ನಿಮ್ಮ ಪ್ರೇಮಿಯಾಗಿರಬಹುದು, ಇದರರ್ಥ ನೀವು ಈ ರೀತಿ ಕೆಟ್ಟದಾಗಿ ವರ್ತಿಸಬಹುದು ಎಂದಲ್ಲ. ನೀವು ಅವಳನ್ನು ರಸ್ತೆಯಲ್ಲಿ ಏಕೆ ಹೊಡೆದಿದ್ದೀರಿ? ಅವಳ ಬಳಿ ಕ್ಷಮೆಯಾಚಿಸಿ." ಎಂದು ಹೇಳಿದರು.
ದಾರಿಹೋಕರು ಸಹ ತನ್ನ ಗೆಳತಿಗೆ ಕ್ಷಮೆಯಾಚಿಸುವಂತೆ ಆ ವ್ಯಕ್ತಿಯನ್ನು ಕೇಳಿದರು. ಇಡೀ ಘಟನೆಯ ವೀಡಿಯೊವನ್ನು ನೆಟ್ಟಿಗರೊಬ್ಬರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿಯ ನಿಂದನಾತ್ಮಕ ನಡವಳಿಕೆಯ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಅನೇಕ ಟ್ವಿಟರ್ ಬಳಕೆದಾರರು ನಟನನ್ನು ಶ್ಲಾಘಿಸಿದರು.