ಹಿಜಾಬ್ ಧರಿಸದ ಮಹಿಳೆಯರ ವಿರುದ್ಧ ಕಠಿಣ ಕಾನೂನು ಕ್ರಮ ಖಚಿತ: ಇರಾನ್‌ನ ನ್ಯಾಯಾಂಗ ಮುಖ್ಯಸ್ಥ ಎಚ್ಚರಿಕೆ

ಹಿಜಾಬ್ ಧರಿಸದ ಮಹಿಳೆಯರ ವಿರುದ್ಧ ಕಠಿಣ ಕಾನೂನು ಕ್ರಮ ಖಚಿತ: ಇರಾನ್‌ನ ನ್ಯಾಯಾಂಗ ಮುಖ್ಯಸ್ಥ ಎಚ್ಚರಿಕೆ

ರಾನ್: ಇರಾನ್ ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್ ಧರಿಸದಿದ್ದರೆ ಕರುಣೆಯಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇರಾನ್‌ನ ನ್ಯಾಯಾಂಗ ಮುಖ್ಯಸ್ಥರು ಶನಿವಾರ ಘೋಷಿಸಿದ್ದಾರೆ.

ವರದಿಗಳ ಪ್ರಕಾರ, ಇರಾನ್‌ನ ಹೆಚ್ಚು ಮಹಿಳೆಯರು ದೇಶದ ಕಡ್ಡಾಯ ಡ್ರೆಸ್ ಕೋಡ್ ಅನ್ನು ಧಿಕ್ಕರಿಸುತ್ತಿರುವುದರಿಂದ, ಹಿಜಾಬ್ ಇಲ್ಲದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮಹಿಳೆಯರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಇರಾನ್‌ನ ನ್ಯಾಯಾಂಗ ಮುಖ್ಯಸ್ಥರು ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ.

ಇರಾನ್‌ನ ಆಂತರಿಕ ಸಚಿವಾಲಯವು ಗುರುವಾರ ಸರ್ಕಾರದ ಕಡ್ಡಾಯ ಹಿಜಾಬ್ ಕಾನೂನನ್ನು ಬಲಪಡಿಸಿದ ಸಮಯದಲ್ಲಿ ಘೋಲಾಮ್‌ಹೊಸ್ಸೇನ್ ಮೊಹ್ಸೇನಿ ಎಜೀ ಅವರ ಎಚ್ಚರಿಕೆ ಬಂದಿದೆ.

ʻಹಿಜಾಬ್ ಧರಿಸದೇ ಇರುವುದು ದ್ವೇಷಕ್ಕೆ ಸಮಾನವಾಗಿದೆ. ಅಂತಹ ಅಸಂಗತ ಕೃತ್ಯಗಳನ್ನು ಮಾಡುವವರಿಗೆ ಶಿಕ್ಷೆಯಾಗುತ್ತದೆ ಮತ್ತು ಕರುಣೆಯಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದುʼ ಎಂದು ಘೋಲಂಹೊಸ್ಸೇನ್ ಮೊಹ್ಸೇನಿ ಎಜೇಯ್ ಹೇಳಿದ್ದಾರೆ.