ಹಣದ ಉಳಿತಾಯ ಮತ್ತು ತೆರಿಗೆ ಭಾರ ಇಳಿಸಿಕೊಳ್ಳಲು ಇಲ್ಲಿದೆ ಬೆಸ್ಟ್ ಸ್ಕೀಮ್

ನೌಕರರ ಭವಿಷ್ಯ ನಿಧಿ : ಸಂಬಳ ಪಡೆಯುವ ಪ್ರತಿ ನೌಕರನೂ ಈ ಯೋಜನೆಯ ಲಾಭ ಪಡೆಯಬಹುದು.
ಇನ್ ಕಮ್ ಟ್ಯಾಕ್ಸ್ ಆಯಕ್ಟ್ ನ ಸೆಕ್ಷನ್ 80 ಸಿ ಅಡಿಯಲ್ಲಿ ನಿಮಗೆ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ಪ್ರತಿವರ್ಷ ಪಿಎಫ್ ಮೇಲೆ ನಿಮಗೆ ಸಿಗುವ ಬಡ್ಡಿ ಹಾಗೂ ಅಂತಿಮ ಮೆಚ್ಯೂರಿಟಿ ಮೊತ್ತಕ್ಕೂ ಯಾವುದೇ ತೆರಿಗೆ ವಿಧಿಸುವುದಿಲ್ಲ.
ಸಾರ್ವಜನಿಕ ಭವಿಷ್ಯ ನಿಧಿ : ಇದು ಅತ್ಯಂತ ಸುರಕ್ಷಿತವಾದ ಉಳಿತಾಯ ಯೋಜನೆ ಉತ್ತಮ ಬಡ್ಡಿ ಕೂಡ ಸಿಗುತ್ತದೆ. ರಿಟರ್ನ್ಸ್ ಗೆ ತೆರಿಗೆ ವಿನಾಯಿತಿ ಇದೆ.
ಪಿಪಿಎಫ್ ಮೇಲಿನ ಬಡ್ಡಿ ದರ ಪ್ರತಿ ತ್ರೈಮಾಸಿಕಕ್ಕೊಮ್ಮೆ ಬದಲಾಗುತ್ತದೆ. ಪಿಪಿಎಫ್ ನಲ್ಲಿ EEE ಸ್ಟೇಟಸ್ ಇದೆ. ನಿಮ್ಮ ಠೇವಣಿ ಬಡ್ಡಿ ಹಾಗೂ ಮೆಚ್ಯೂರಿಟಿ ಮೊತ್ತ ಸಂಪೂರ್ಣ ಬಡ್ಡಿ ರಹಿತವಾಗಿರುತ್ತದೆ.
ಫಿಕ್ಸೆಡ್ ಡೆಪಾಸಿಟ್ಸ್ (ಎಫ್ ಡಿ) : ಇದು ಕೂಡ ಅತ್ಯಂತ ಜನಪ್ರಿಯ ಉಳಿತಾಯ ಯೋಜನೆ. ಇದನ್ನು ಟರ್ಮ್ ಡೆಪಾಸಿಟ್ಸ್ ಅಂತಾನೂ ಕರೆಯಲಾಗುತ್ತದೆ. ನೀವು ಠೇವಣಿ ಇಟ್ಟಿರುವ ಹಣಕ್ಕೆ ನಿಗದಿತ ಅವಧಿಗೆ ನಿರ್ದಿಷ್ಟ ಬಡ್ಡಿ ದೊರೆಯುತ್ತದೆ. ಬಡ್ಡಿ ದರ ಪ್ರತಿ ಬ್ಯಾಂಕ್ ನಲ್ಲೂ ಬೇರೆ ಬೇರೆ ತೆರನಾಗಿರುತ್ತದೆ. ಆದ್ರೆ ಎಫ್ ಡಿಯಲ್ಲಿ ನಿಮಗೆ ಸಿಗುವ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ.
ರಾಷ್ಟ್ರೀಯ ನಿವೃತ್ತಿ ಯೋಜನೆ : ನ್ಯಾಶನಲ್ ಪೆನ್ಷನ್ ಸ್ಕೀಮ್ (ಪಿಎನ್ಎಸ್) 2004ರ ಜನವರಿ 1ರಂದು ಆರಂಭವಾಯ್ತು. ಎಲ್ಲಾ ನಾಗರಿಕರಿಗೂ ನಿವೃತ್ತಿ ಆದಾಯ ದೊರಕಿಸುವುದು ಯೋಜನೆಯ ಉದ್ದೇಶ. ಇದು ಸಂಪೂರ್ಣ ತೆರಿಗೆ ವಿನಾಯಿತಿ ಹೊಂದಿಲ್ಲ.
ಆದ್ರೆ ಹೆಚ್ಚುವರಿಯಾಗಿ 50,000 ರೂ.ವರೆಗೆ ತೆರಿಗೆ ವಿನಾಯಿತಿ ಸೌಲಭ್ಯವಿದೆ. ರಾಷ್ಟ್ರೀಯ ನಿವೃತ್ತಿ ಯೋಜನೆಯಲ್ಲಿ ಪಿಪಿಎಫ್/ಪಿಎಫ್ ಗಿಂತ ಹೆಚ್ಚಿನ ರಿಟರ್ನ್ಸ್ ಪಡೆಯಬಹುದು. 2 ಲಕ್ಷ ರೂಪಾಯಿವರೆಗಿನ ಹೂಡಿಕೆಗೆ ಎನ್ ಪಿ ಎಸ್ ನಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ : ಇದು ಕೇಂದ್ರ ಸರ್ಕಾರದ ಉಳಿತಾಯ ಯೋಜನೆ, ಅಂಚೆ ಕಚೇರಿಗಳಲ್ಲಿ ಲಭ್ಯವಿದೆ. ಇಲ್ಲಿ ಹೂಡಿಕೆ ಮಾಡಲು ಯಾವುದೇ ಮಿತಿಯಿಲ್ಲ. ಬಡ್ಡಿ ಮೇಲೆ ಟಿಡಿಎಸ್ ಕೂಡ ಕಡಿತ ಮಾಡಲಾಗುವುದಿಲ್ಲ. ಆದ್ರೆ NSC ಮೇಲೆ ಪಡೆದ ಬಡ್ಡಿಗೆ ತೆರಿಗೆ ವಿಧಿಸಲಾಗುತ್ತದೆ.