ಸ್ವಮೂತ್ರ ಪಾನ ಏಡ್ಸ್, ಕ್ಯಾನ್ಸರ್ ಗಳಿಗೆ ಔಷಧ
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಅನ್ವಯ ಕೆಲವು ಲೇಖಕರು ಮೈಸೂರು ವಿವಿಯ ಪದವಿ ತರಗತಿಗೆಂದು ಬರೆದ 'ವೈದ್ಯಕೀಯ ಸಮಾಜಶಾಸ್ತ್ರ' ಪುಸ್ತಕದಲ್ಲಿನ ಅಧ್ಯಯನವೊಂದು ಚರ್ಚೆಗೆ ಗ್ರಾಸವಾಗಿದೆ. ಮೂತ್ರ ಚಿಕಿತ್ಸೆಯು ಪ್ರಕೃತಿ ಚಿಕಿತ್ಸೆಯ ಭಾಗ. ಸ್ವಮೂತ್ರ ಪಾನ, ಮೂತ್ರ ಲೇಪನದಿಂದ ಕ್ಯಾನ್ಸರ್, ಏಡ್ಸ್, ಕಿವಿ, ಹಲ್ಲು, ಚರ್ಮ ರೋಗಗಳನ್ನು ನಿಯಂತ್ರಿಸಬಹುದು ಎಂದು ಪಾಠದಲ್ಲಿ ಉಲ್ಲೇಖಿಸಲಾಗಿದೆ. ರೋಗ ನಿರೋಧಕ ಶಕ್ತಿ ಮನುಷ್ಯನ ದೇಹದಲ್ಲೇ ಇದೆ ಎಂದು ವಿವರಿಸಲಾಗಿದೆ.