ಶಿವರಾಮೇಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: ಅವಾಚ್ಯ ಶಬ್ದಗಳಿಂದ ನಿಂದನೆ

ಶಿವರಾಮೇಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: ಅವಾಚ್ಯ ಶಬ್ದಗಳಿಂದ ನಿಂದನೆ

ಮಂಡ್ಯ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಮೂರು ಪಕ್ಷಗಳ ಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ.

ಈ ನಡುವೆಯೇ ನಾಯಕರು ತಮ್ಮ ಪಕ್ಷವನ್ನು ತೊರೆದು ಬೇರೆ ಬೇರೆ ಪಕ್ಷಗಳಿಗೆ ಹೋಗುತ್ತಿದ್ದಾರೆ.

ಇತ್ತೀಚೆಗೆ ಸುಮಲತಾ ಕೂಡ ಬಿಜೆಪಿ ಬೆಂಬಲಿಸುವುದಾಗಿ ಘೋಷಿಸಿದ್ದರು. ಈಹಿನ್ನೆಲೆಯಲ್ಲಿ ಮಾಜಿ ಸಂಸದ ಎಲ್​ಆರ್ ಶಿವರಾಮೇಗೌಡ ನಿನ್ನೆ ಬಿಜೆಪಿ ಪಕ್ಷಕ್ಕೆ ಬೆಂಬಲ ಘೋಷಿಸಿದ್ದರು. ಹೀಗಾಗಿ ಶಿವರಾಮೇಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ 420 ಎಂದು ಪೋಸ್ಟ್‌ ಮಾಡಲಾಗಿದೆ

ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದವರ ವಿರುದ್ಧ ಎಲ್.ಆರ್ ಶಿವರಾಮೇಗೌಡ ಆಕ್ರೋಶ ಹೊರಗೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆಡಿಯೋ ವೈರಲ್​​​ ಆಗಿದೆ.ನಾಗಮಂಗಲ ಕ್ಷೇತ್ರದ ಮೋಹನ್ ಎಂಬವರು 420 ಶಿವರಾಮೇಗೌಡ ಎಂದು ಪೋಸ್ಟ್ ಮಾಡಿದ್ದು, ಇವರಿಗೆ ಕರೆ ಮಾಡಿ ಶಿವರಾಮೇಗೌಡ ಕೆಟ್ಟದಾಗಿ ಪೋಸ್ಟ್ ಯಾಕೆ ಮಾಡಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.ಆಗ ವ್ಯಕ್ತಿ ನಾನು ಪೋಸ್ಟ್ ಮಾಡಿಲ್ಲ, ಬೇರೆ ಯಾರೋ ಮಾಡಿರಬೇಕು ಎಂದಿದ್ದಾರೆ. ಕೊನೆಗೆ ಶಿವರಾಮೇಗೌಡ ಆಶ ವ್ಯಕ್ತಿಗೆ ದೂರು ದಾಖಲು ಮಾಡುತ್ತೇನೆ ಎಂದು ಹೇಳಿದ್ದಾರೆ