ವರ್ಷದಲ್ಲಿ 3 ಸಾವಿರ ಉದ್ಯೋಗ ಕಡಿತ ಮಾಡಲಿದೆ ಜರ್ಮನಿಯ ಎಸ್ಎಪಿ

ಫ್ರಾಂಕ್ಫರ್ಟ್, ಜರ್ಮನಿ (ಎಎಫ್ಪಿ): ಜರ್ಮನಿಯ ಸಾಫ್ಟ್ವೇರ್ ಕಂಪನಿ ಎಸ್ಎಪಿ ಈ ವರ್ಷದಲ್ಲಿ 3 ಸಾವಿರ ನೌಕರರನ್ನು ಕೆಲಸದಿಂದ ತೆಗೆಯಲು ಯೋಜಿಸಿರುವುದಾಗಿ ಗುರುವಾರ ಹೇಳಿದೆ.
ಮೂಲ ವಹಿವಾಟಿನ ಕಡೆಗೆ ಹೆಚ್ಚು ಗಮನ ಕೊಡುವ ಉದ್ದೇಶದಿಂದ ಕಂಪನಿಯಲ್ಲಿ ಕೆಲವು ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ.