ವಂದೇ ಭಾರತ್‌ ಬಳಿಕ ಶೀಘ್ರದಲ್ಲೇ ಭಾರತದ ಮೊದಲ ರ‍್ಯಾಪಿಡ್‌ ರೈಲು ಸೇವೆ ಆರಂಭ

ವಂದೇ ಭಾರತ್‌ ಬಳಿಕ ಶೀಘ್ರದಲ್ಲೇ ಭಾರತದ ಮೊದಲ ರ‍್ಯಾಪಿಡ್‌ ರೈಲು ಸೇವೆ ಆರಂಭ

ವದೆಹಲಿ, ಫೆಬ್ರವರಿ 13: ವಿಮಾನ ಮಾದರಿ ಸೌಲಭ್ಯಗಳನ್ನು ಹೊಂದಿರುವ ಭಾರತದ ಮೊದಲ ರ‍್ಯಾಪಿಡ್‌ ರೈಲು ಸೇವೆ 2023 ಮಾರ್ಚ್‌ನಲ್ಲಿ ಗಾಜಿಯಾಬಾದ್‌ನ ಸಾಹಿಬಾಬಾದ್‌ನಿಂದ ದುಹೈಗೆ ಸಂಚಾರ ಪ್ರಾರಂಭಿಸಲಿದೆ.

ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಜನಪ್ರಿಯತೆಯಿಂದ ಉತ್ತೇಜಿತಗೊಂಡಿರುವ ಭಾರತೀಯ ರೈಲ್ವೆ ಮೊದಲ ರ‍್ಯಾಪಿಡ್‌ ರೈಲು ಸೇವೆಯನ್ನು ಸಾಹಿಬಾಬಾದ್, ಘಾಜಿಯಾಬಾದ್, ಗುಲ್ಧರ್, ದುಹೈ ಮತ್ತು ದುಹೈ ಡಿಪೋಗಳ 17 ಕಿ.ಮೀ ಮಾರ್ಗದಲ್ಲಿ ಓಡಿಸಲು ಮುಂದಾಗಿದೆ.

ಗಂಟೆಗೆ 180 ಕಿಮೀ ಈಡುವ ಈ ರೈಲಿನ ಪ್ರಯಾಣದ ಟಿಕೆಟ್‌ಗಳನ್ನು ಮೊಬೈಲ್ ಫೋನ್ ಮತ್ತು ಕಾರ್ಡ್‌ಗಳ ಮೂಲಕ ಪಡೆಯಬಹುದು.

ದೇವರಿಗೆ ದಂಡ: ಭಜರಂಗ ಬಲಿಗೆ ನೋಟಿಸ್ ನೀಡಿದ ರೈಲ್ವೇ ಇಲಾಖೆ!

ಉದ್ದೇಶಿತ ವಿಭಾಗದ ಮಾರ್ಗದಲ್ಲಿ ರೈಲ್ವೆ ಟ್ರ್ಯಾಕ್ ಹಾಕಲಾಗಿದ್ದು, ಓವರ್‌ ಹೆಡ್ ಲೈನ್ ಉಪಕರಣಗಳ ಸ್ಥಾಪನೆಯ ಕೆಲಸವು ಬಹುತೇಕ ಮುಗಿದಿದೆ. ರೈಲಿನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೋಚ್‌ಗಳು ಮತ್ತು ಅಂಗವಿಕಲರಿಗಾಗಿ ವಿಶೇಷ ಮಡಚಬಹುದಾದ ಆಸನಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಅಡ್ಜೆಸ್ಟ್ ಮಾಡಬಹುದಾದ ಕುರ್ಚಿಗಳಿದ್ದು, ನಿಂತಿರುವ ಪ್ರಯಾಣಿಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ರ‍್ಯಾಪಿಡ್‌ ರೈಲು ವೈಫೈ, ಮೊಬೈಲ್ ಯುಎಸ್‌ಬಿ ಚಾರ್ಜರ್, ದೊಡ್ಡ ಕಿಟಕಿಗಳು, ಇಂಟಿಗ್ರೇಟೆಡ್ ಎಸಿ ಸಿಸ್ಟಮ್, ಸ್ವಯಂಚಾಲಿತ ಡೋರ್ ಕಂಟ್ರೋಲ್ ಸಿಸ್ಟಮ್, ಲಗೇಜ್ ಸ್ಟೋರೇಜ್, ಡ್ರೈವರ್ ಇಂಟರಾಕ್ಷನ್ ಸಿಸ್ಟಮ್, ಡೈನಾಮಿಕ್ ರೂಟ್ ಮ್ಯಾಪ್, ಸಿಸಿಟಿವಿ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ದುಹೈ ಯಾರ್ಡ್‌ನಲ್ಲಿ 13 ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಮೊದಲ ಹಂತದಲ್ಲಿ 13 ಕ್ಷಿಪ್ರ ರೈಲುಗಳನ್ನು ಮಾತ್ರ ಓಡಿಸಲು ಸಿದ್ಧತೆ ನಡೆಸಲಾಗುತ್ತಿದೆ. ಆದರೆ ದೆಹಲಿ ಮತ್ತು ಮೀರತ್ ನಡುವೆ ಸಂಪೂರ್ಣ ಮಾರ್ಗ ನಿರ್ಮಾಣದ ನಂತರ ಒಟ್ಟು 30 ಕ್ಷಿಪ್ರ ರೈಲುಗಳು ಕಾರ್ಯನಿರ್ವಹಿಸಲಿವೆ.

ಘಾಜಿಯಾಬಾದ್‌ನ ದುಹೈ ಯಾರ್ಡ್‌ನಲ್ಲಿ ರ‍್ಯಾಪಿಡ್‌ ರೈಲು ಕಾರಿಡಾರ್‌ನ ಕಾರ್ಯಾಚರಣೆ ಮತ್ತು ಕಮಾಂಡ್ ಕಂಟ್ರೋಲ್ ಕೇಂದ್ರವನ್ನು ಮಾಡಲಾಗುತ್ತಿದೆ. ಸಂಪೂರ್ಣ ಮಾರ್ಗದಲ್ಲಿ ಚಲಿಸುವ ಎಲ್ಲಾ ಕ್ಷಿಪ್ರ ರೈಲುಗಳ ಕಾರ್ಯಾಚರಣೆ ಮತ್ತು ನಿಯಂತ್ರಣವನ್ನು ಕಾರ್ಯಾಚರಣೆ ಕೇಂದ್ರದಿಂದ ಮಾಡಲಾಗುತ್ತದೆ. ಆರ್‌ಆರ್‌ಟಿಎಸ್ ಈ ರ‍್ಯಾಪಿಡ್‌ ರೈಲಿನ ಟಿಕೆಟ್ ದರಗಳನ್ನು ಸದ್ಯಕ್ಕೆ ಪ್ರಕಟಿಸಲಾಗಿಲ್ಲ.

ದೆಹಲಿ-ಗಾಜಿಯಾಬಾದ್-ಮೀರತ್ ರ‍್ಯಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್) ಕಾರಿಡಾರ್ ಯೋಜನೆಯ ಉದ್ದೇಶವು ರಾಷ್ಟ್ರೀಯ ರಾಜಧಾನಿ ಪ್ರದೇಶದ ದಟ್ಟಣೆಯನ್ನು ಕಡಿಮೆ ಮಾಡುವುದಾಗಿದೆ. ಇಲ್ಲಿನ ವಾಹನ ದಟ್ಟಣೆ, ವಾಯು ಮಾಲಿನ್ಯವನ್ನು ನಿಗ್ರಹಿಸುವುದು ಮತ್ತು ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಉತ್ತೇಜನೆ ಮಾಡಲು ಕೈಗೊಂಡ ಕ್ರಮವಾಗಿದೆ.


ದೆಹಲಿಯಿಂದ ಮೀರತ್ ಮಾರ್ಗದಲ್ಲಿ ಸಂಚಾರ

ಸಂಪೂರ್ಣ ದೆಹಲಿಯಿಂದ ಮೀರತ್ ಮಾರ್ಗವನ್ನು 2025ರ ವೇಳೆಗೆ ಮೂರು ಹಂತಗಳಲ್ಲಿ ರ‍್ಯಾಪಿಡ್‌ ರೈಲು ಕಾರಿಡಾರ್‌ ಯೋಜನೆಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಮೊದಲನೆಯದು ಮಾರ್ಚ್‌ನಿಂದ ಸಾಹಿಬಾಬಾದ್‌ನಿಂದ ದುಹೈ ಡಿಪೋಗೆ, ಎರಡನೇಯದು ಸಾಹಿಬಾಬಾದ್‌ನಿಂದ ಮೀರತ್‌ಗೆ ಮಾರ್ಚ್ 2024 ರೊಳಗೆ ಮತ್ತು ಮೀರತ್‌ನ ಮೋದಿಪುರಂನಿಂದ ದೆಹಲಿಯ ಸರಾಯ್ ಕಾಲೇ ಖಾನ್‌ವರೆಗೆ 2025 ರ ವೇಳೆಗೆ ಕಾರ್ಯನಿರ್ವಹಿಸಲಿದೆ.

24 ನಿಲ್ದಾಣ ಹೊಸ ನಿಲ್ದಾಣಗಳ ನಿರ್ಮಾಣ

ದೆಹಲಿ-ಮೀರತ್ ಆರ್‌ಆರ್‌ಟಿಎಸ್ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದ 30,274 ಕೋಟಿ ರೂಪಾಯಿಗಳ ಜಂಟಿ ಉದ್ಯಮವಾಗಿದೆ. ಉತ್ತರ ಪ್ರದೇಶ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಯೋಜನೆಗೆ 1,326 ಕೋಟಿ ರೂಪಾಯಿ ಇಟ್ಟಿದೆ. ಆರ್‌ಆರ್‌ಟಿಎಸ್ ಯೋಜನೆಯ ಪ್ರಕಾರ ಇಡೀ ಕಾರಿಡಾರ್‌ನಲ್ಲಿ 24 ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಲಾಗಿದೆ.

ಐದು ನಿಲ್ದಾಣಗಳ ಮೂಲಕ ಸಂಚಾರ

ರ‍್ಯಾಪಿಡ್‌ ರೈಲು ಮೊದಲ ಹಂತದಲ್ಲಿ ಸಾಹಿಬಾಬಾದ್, ಗಾಜಿಯಾಬಾದ್, ಗುಲ್ಧರ್, ದುಹೈ ಮತ್ತು ದುಹೈ ಡಿಪೋಗಳಲ್ಲಿ ಐದು ನಿಲ್ದಾಣಗಳಲ್ಲಿ ಸಂಚರಿಸಲಿದೆ. ಪ್ರಯಾಣಿಕರು ಗಂಟೆಗೆ 180 ಕಿ.ಮೀ ವೇಗದಲ್ಲಿ ಇಡೀ ದೆಹಲಿ-ಗಾಜಿಯಾಬಾದ್-ಮೀರತ್ ಮಾರ್ಗದಲ್ಲಿ ಒಟ್ಟು 30 ರೈಲುಗಳನ್ನು ಓಡಿಸಲು ಯೋಜಿಸಲಾಗಿದ್ದು, ಮೊದಲ ಹಂತದಲ್ಲಿ 13 ರೈಲುಗಳು ಕಾರ್ಯನಿರ್ವಹಿಸಲಿವೆ.

ಪ್ರತಿ ಕಿಲೋಮೀಟರ್‌ಗೆ 2 ರೂ. ದರಪ್ರಯಾಣಿಕರು ಮೊಬೈಲ್ ಫೋನ್ ಮತ್ತು ಕಾರ್ಡ್‌ಗಳ ಮೂಲಕ ಟಿಕೆಟ್ ಖರೀದಿಸಬಹುದಾಗಿದೆ. ರೈಲು ದರವನ್ನು ಪ್ರತಿ ಕಿಲೋಮೀಟರ್‌ಗೆ ಸುಮಾರು 2 ರೂಪಾಯಿಗೆ ನಿಗದಿಪಡಿಸಲಾಗುವುದು ಎಂದು ಯೋಜನಾ ವರದಿ (ಡಿಪಿಆರ್) ನಲ್ಲಿನ ಅಂದಾಜುಗಳು ತಿಳಿಸಿವೆ. ಮೆಟ್ರೊದಂತೆಯೇ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಪ್ರಯಾಣ ದರವನ್ನು ನಿರ್ಧರಿಸುತ್ತದೆ. ನಂತರ ಪ್ರಯಾಣ ದರವನ್ನು ಹೆಚ್ಚಿಸುವ ಹಕ್ಕು ಖಾಸಗಿ ಏಜೆನ್ಸಿಗೆ ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.